ಮೈಸೂರು:
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ಔಷಧಿಗಳ ಪರಿಣಾಮ ಕೆಲವರಲ್ಲಿ ಸ್ತನ ಕ್ಯಾನ್ಸರ್ ಹತೋಟಿಗೆ ಬಂದು ಜೀವನ ನಡೆಸುವಂತಾದರೆ ಇನ್ನು ಕೆಲವರು ಈ ಮಾರಕ ಕ್ಯಾನ್ಸರ್ ನಿಂದ ಮೃತಪಡುತ್ತಾರೆ.

ಕ್ಯಾನ್ಸರ್
ಕ್ರಿಜೊಟಿನಿಬ್ ಸಂಯೋಜನೆಯೊಂದಿಗೆ ಸ್ತನ ಕ್ಯಾನ್ಸರ್ ಗುಣಪಡಿಸುವಲ್ಲಿ ಹೊಸ ಕೀಮೊ ಔಷಧವನ್ನು ಮೈಸೂರು ವಿಶ್ವವಿದ್ಯಾಲಯ ಆವಿಷ್ಕರಿಸಿದೆ.

ಭಾರತ ಮತ್ತು ಚೀನಾದ ಸಿಂಘುವಾ ಸಂಸ್ಥೆಗಳ(ಟಿಬಿಎಸ್‌ಐ) ಜತೆಗೂಡಿ ಈ ಅವಿಷ್ಕಾರವನ್ನು
ಬಸಪ್ಪ ಮತ್ತು ಡಾ.ವಿ.ಪಾಂಡ ಅವರ ತಂಡವು ಆಕ್ರಮಣಕಾರಿಯಾದ ಹಾಗೂ ಈಸ್ಟೋಜನ್, ಪ್ರೊಜೆಸ್ಟರಾನ್ ಮತ್ತು ಹೆರ್ 9 ಹಾರ್ಮೋನ್ ರಹಿತ ಸ್ತನ ಕ್ಯಾನ್ಸರ್ ಕೋಶಗಳನ್ನು (ಟಿಎನ್ ಬಿಸಿ) ಕೊಲ್ಲುವ ಅನ್ವೇಷಣೆಯಲ್ಲಿ ಅವಿಷ್ಕಾರವನ್ನು ಪರಿಚಯಿಸಿದ್ದಾರೆ. ಇವರು ಎಐ ಬಳಸಿ ನೂರಾರು ಸ್ತನ ಕ್ಯಾನ್ಸರ್ ಎನ್‌ಸಿಕೆ ಜತೆ ಪರೀಕ್ಷಿಸಿ,ಉತ್ತಮ ಸಂಯೋಜನೆಯನ್ನು ಔಷಧ ವಿಜ್ಞಾನ ಕ್ಷೇತ್ರಕ್ಕೆ ನೀಡಿದ್ದಾರೆ.