ದೆಹಲಿ : ಗಾಂಧಿ-ನೆಹರು ಕುಟುಂಬದ ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಲೋಕಸಭಾ ಸ್ಪರ್ಧೆ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರು ತಮ್ಮ ಕುಟುಂಬದ ಸಾಂಪ್ರದಾಯಿಕ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿ ಕೆಲ ದಿನಗಳಿಂದ ಹರಡಿತ್ತು. ಆದರೆ, ಇದೀಗ ಅವರ ಸ್ಪರ್ಧೆ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಅಮೇಠಿ ಹಾಗೂ ಕೇರಳದ ವಯನಾಡ್ ನಿಂದ ರಾಹುಲ್ ಗಾಂಧಿ ಮತ್ತು ಈ ಹಿಂದೆ ಸೋನಿಯಾ ಗಾಂಧಿ ಹೊಂದಿದ್ದ ಕ್ಷೇತ್ರವಾದ ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಉಮೇದುವಾರಿಕೆ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಪ್ರಿಯಾಂಕಾ ಸ್ಪರ್ಧೆ ಅನುಮಾನ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸೋನಿಯಾ ಗಾಂಧಿ ರಾಜ್ಯ ಸಭೆಗೆ ಆಯ್ಕೆ ಆಗಿರುವ ಕಾರಣ ರಾಯ್‌ಬರೇಲಿ ಕ್ಷೇತ್ರ ತೆರವಾಗಿದೆ.