ಶ್ರೀನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಶ್ಮೀರದ ಯುವಕನೊಂದಿಗೆ ಸೆಲ್ಪಿ ತೆಗೆದುಕೊಂಡು ‘ಇವನು ನನ್ನ ಸ್ನೇಹಿತ’ನೆಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡು ಗಮನ ಸೆಳೆದಿದ್ದಾರೆ. ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಶ್ರೀನಗರಕ್ಕೆ ಭೇಟಿ ನೀಡಿದ್ದ ಮೋದಿ, ಕೇಂದ್ರ ಸರ್ಕಾರಿ ಯೋಜನೆಗಳಿಂದ ಸಹಾಯ ಪಡೆದು ಜೇನು ಸಾಕಾಣಿಕೆಯಲ್ಲಿ ಯಶಸ್ವಿಯಾದ ನಜೀಮ್ ನಜೀರ್‌ ಎಂಬ ಯುವಕನೊಂದಿಗೆ ಸೆಲ್ಪಿ

ತೆಗೆದುಕೊಂಡಿದ್ದಾರೆ ಹಾಗೂ ಅವನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಜೊತೆ ಸಂವಾದಕ್ಕೆ ಆಯ್ಕೆಯಾದ ವಿಕಸಿತ ಭಾರತ ಯೋಜನೆಯ ಫಲಾನುಭವಿ ಯುವಕರಲ್ಲಿ ನಜೀರ್ ಒಬ್ಬನಾಗಿದ್ದ. ಆಗ ನಜೀರ್, ಮೋದಿ ಜತೆ ಸೆಲ್ಪಿ ಬಯಕೆ ವ್ಯಕ್ತಪಡಿಸಿದ. ಇದಕ್ಕೆ ಮೋದಿ ಒಪ್ಪಿದರು.