ಶಂಕರಘಟ್ಟ : ಕುವೆಂಪು ವಿಶ್ವವಿದ್ಯಾಲಯದ ನೂತನ ಪ್ರಭಾರ ಕುಲಪತಿಯಾಗಿ ನೇಮಕಗೊಂಡಿರುವ ಪ್ರೊ.‌ ಎಸ್. ವಿ. ಕೃಷ್ಣಮೂರ್ತಿ ಶುಕ್ರವಾರ ಅಪರಾಹ್ನ ಅಧಿಕಾರ ಸ್ವೀಕರಿಸಿದರು.

ಪ್ರೊ.‌ ಎಸ್. ವೆಂಕಟೇಶ್ ಅವರ ಡೀನ್ ಅವಧಿ ಮಾರ್ಚ್ 01ಕ್ಕೆ ಮುಕ್ತಾಯಗೊಂಡ‌ ಹಿನ್ನೆಲೆಯಲ್ಲಿ ನಂತರದ ಹಿರಿಯ ಡೀನರಾದ ಪ್ರೊ. ಎಸ್. ವಿ. ಕೃಷ್ಣಮೂರ್ತಿ ಅವರನ್ನು ಪ್ರಭಾರ ಕುಲಪತಿಯನ್ನಾಗಿ‌ ನೇಮಕಗೊಳಿಸಿ‌ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಮೂಲತಃ ಪರಿಸರ ವಿಜ್ಞಾನ ಪ್ರಾಧ್ಯಾಪಕರಾದ ಪ್ರೊ.‌ ಕೃಷ್ಣಮೂರ್ತಿ ಅವರ ಡೀನ್ ಅವಧಿ ಮಾರ್ಚ್, 2025ರವರೆಗೆ ಇದ್ದು, ಪೂರ್ಣಾವಧಿ ಕುಲಪತಿ ನೇಮಕಗೊಳ್ಳುವವರೆಗೆ ಕಾರ್ಯನಿರ್ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರೊ. ಎಸ್ ವೆಂಕಟೇಶ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಂ ಎಸ್ ಗೋಪಿನಾಥ್, ಹಣಕಾಸು ಅಧಿಕಾರಿ ಜಿ.‌ ಬಂಗಾರಪ್ಪ, ಡಾ. ಕೆ.‌ ಆರ್. ಮಂಜುನಾಥ್ ಸೇರಿದಂತೆ ವಿವಿಧ ಆಡಳಿತಾಧಿಕಾರಿಗಳು ಹಾಜರಿದ್ದರು.