ಬೆಳಗಾವಿ :
ಶಾಲಾ ಶಿಕ್ಷಣ ಪದವಿ ಪೂರ್ವ ಉಪ‌ನಿರ್ದೇಶಕರು ಬೆಳಗಾವಿ ಇವರ ಸಹಯೋಗದಲ್ಲಿ ಪದವಿ ಪೂರ್ವ ಗಣಕ, ಸಂಖ್ಯಾ , ಭೂಗೋಳ ಮತ್ತು ಶಿಕ್ಷಣ ಶಾಸ್ತ್ರ ವಿಷಯಗಳ ಕುರಿತು ಇಂದು (ದಿ. 04 01.2024) ಬೆಳಗಾವಿ ನಗರದ ಪ್ರೇರಣಾ ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ನಗರದ ಸರಸ್ವತಿ ಪಿಯು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಸಿ. ಶಿರಶ್ಯಾಡ ಅವರು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, “ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಮತ್ತು ಫಲಿತಾಂಶ ವೃದ್ಧಿಸುವ ಹಿನ್ನಲೆಯಲ್ಲಿ ಬದಲಾದ ಪ್ರಶ್ನೆ ಪತ್ರಿಕೆ ಸಿದ್ಧತೆ ಹಾಗೂ ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಸರಿಯಾದ ಕ್ರಮದಲ್ಲಿ‌ ಮನವರಿಕೆ ಮಾಡಬೇಕಾದ ಅಗತ್ಯವಿರುವುದರಿಂದ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರ ಮುಖ್ಯವಾಗುತ್ತದೆ. ಪಠ್ಯಕ್ರಮ ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳನ್ನು
ಸೂಕ್ಷ್ಮವಾಗಿ ಗಮನಿಸಿ, ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಜ್ಞಾನದ ಹಂತಗಳನ್ನು ಗಮನದಲ್ಲಿರಿಸಿಕೊಂಡು ಮನವರಿಕೆ ಮಾಡಿಕೊಡಲು ಮುಂದಾಗಬೇಕೆಂದು ಸೂಚಿಸಿದರು.

ಕಾರ್ಯಾಗಾರದಲ್ಲಿ ವಿಷಯ ತಜ್ಞರಾಗಿ ಶಿಕ್ಷಣ ಶಾಸ್ತ್ರ ವಿಭಾಗದಿಂದ ನಾಗರಾಜ್ ಮರೆನ್ನವರ, ಸಂಖ್ಯಾ ಶಾಸ್ತ್ರ ವಿಭಾಗದಿಂದ ಶಾಂತಲಾ ಕುಲಕರ್ಣಿ, ಗಣಕ ಶಾಸ್ತೃ ವಿಭಾಗದಿಂದ ವೀರೇಶ ಕುಲಕರ್ಣಿ ಭಾಗವಹಿಸಿದ್ದರು.

ಪ್ರೇರಣಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕಿರಣ ಪಾಟೀಲ, ಹಾಗೂ ಬೆಳಗಾವಿ ನಗರದ ವಿವಿಧ ಪಿ.ಯು. ಕಾಲೇಜಿನ ಸುಮಾರು 50 ಉಪನ್ಯಾಸಕರು ಉಪಸ್ಥಿತರಿದ್ದರು.

ಉಪನ್ಯಾಸಕಿಯರಾದ ನೂತನ್ ಪ್ರಭು, ಮೇಘಾ ಮೂಡಲಗಿ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಸ್ವಾತಿ ಹೆಗ್ಗರೆ ನಿರೂಪಿಸಿ, ವಂದಿಸಿದರು.