ಬೆಳಗಾವಿ: ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರಗೆ ಟಿಕೆಟ್ ಕೊಡಿಸಲು ನಾನು ಕಾರಣವಾಗಿದ್ದೇನೆ. ಒಂದು ವೇಳೆ ಅವರನ್ನು ಬೆಳೆಸುವ ಉದ್ದೇಶವಿಲ್ಲದಿದ್ದರೇ ಬೇರೆಯವರಿಗೆ ಟಿಕೆಟ್ ನೀಡುವಂತೆ ಸೂಚಿಸುತ್ತಿದ್ದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಶಾಸಕರಿಗೆ ತಿರುಗೇಟು ನೀಡಿದ್ದಾರೆ.

ಇಂದು ಬೆಳಗ್ಗೆ ಚಿಕ್ಕೋಡಿಯಲ್ಲಿ ಪ್ರೆಸ್ ಮೀಟ್ ಕರೆದು ಸಚಿವ ಸತೀಶ್‌ ಜಾರಕಿಹೊಳಿ ವಿರುದ್ಧ ಶಾಸಕ ಮಹೇಂದ್ರ ತಮ್ಮಣ್ಣವರ ಅಸಮಾಧಾನ ಹೊರಹಾಕಿದ್ದಾರೆ.ಈ ಭಾಗದ ಎಸ್‌ಸಿ ನಾಯಕರನ್ನು ರಾಜಕೀಯವಾಗಿ ಜಾರಕಿಹೊಳಿ ಫ್ಯಾಮಿಲಿ ನಿರ್ನಾಮ ಮಾಡ್ತಿದೆ ಎಂದು ಆರೋಪಿಸಿದರು. ಮಹೇಂದ್ರ ತಮ್ಮಣ್ಣವರ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಮತದಾನಕ್ಕಿಂತ ಎರಡು ದಿನ ಮುಂಚೆ ಮಹೇಂದ್ರ ತಮ್ಮಣ್ಣವರ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಚುನಾವಣೆಯಲ್ಲಿ ಅವರ ಸಂಬಂಧಿ ಶಂಭು ಕಲ್ಲೋಳಿಕರ ಪರವಾಗಿ ಕೆಲಸ ಮಾಡಿದ್ದಾರೆ. ಕುಡಚಿಯಲ್ಲಿ ಶಂಭು ಕಲ್ಲೋಳಿಕರಗೆ ಕೇವಲ ಮೂರು ಸಾವಿರ ಮತಗಳು ಬಂದಿವೆ.ಮಹೇಂದ್ರ ತಮ್ಮಣ್ಣವರ ತಾಕತ್ತು ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.ನಾನು ಯಾವ ನಾಯಕರನ್ನು ತುಳಿಯುವ ಪ್ರಯತ್ನ ಮಾಡ್ತಿಲ್ಲ. ಪಕ್ಷದಲ್ಲಿ ಇದ್ದುಕೊಂಡು ಬೇರೆಯವರ ಪರವಾಗಿ ಮಹೇಂದ್ರ ತಮ್ಮಣ್ಣವರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.