ಮರವಂತೆ ಕಡಲ ಕಿನಾರೆ ಬಗ್ಗೆ
ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು ಮೆಚ್ಚುಗೆ ಸೂಚಿಸಿದ್ದು, ಉಡುಪಿ ಬೀಚ್, ದೇವಾಲಯ, ಆಹಾರವೆಂದರೆ ಇಷ್ಟ ಎಂದಿದ್ದಾರೆ. ಕರ್ನಾಟಕ ಕರಾವಳಿಯ ಸುಂದರ ಕಡಲ ಕಿನಾರೆಗಳಲ್ಲಿ ಒಂದಾಗಿರುವ ಮರವಂತೆ ಬೀಚ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಮಾತ್ರವಲ್ಲದೆ ಇದು ಬೆಳಕಿಗೆ ಬಾರದ ಭಾರತ ಸುಂದರ ತಾಣಗಳಲ್ಲಿ ಒಂದು ಎಂದು ಪ್ರಶಂಸಿದ್ದಾರೆ. ಇನ್ನು
ಉಡುಪಿ ಕುಂದಾಪುರಕ್ಕೆ ಯಾವತ್ತಾದರೂ ಭೇಟಿ ನೀಡಿದ್ದೀರಾ ಎಂಬ ಕುಂದಾಪುರದ ಮಹೇಶ ಪೂಜಾರಿ ಎಂಬವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಹೌದು, ಉಡುಪಿ ನಿಜಕ್ಕೂ ಅದ್ಬುತ. ಪ್ರಾಚೀನ ಕಡಲತೀರಗಳು, ದೇವಾಲಯ ಮತ್ತು ಅದ್ಭುತ ಆಹಾರ ಎಂದು ಸಂಕ್ಷಿಪ್ತವಾಗಿ ಕರ್ನಾಟಕದ ಕರಾವಳಿಯನ್ನು ಹೊಗಳಿದ್ದಾರೆ. ಅವರ ಈ ಪೋಸ್ಟ್ ಅನ್ನು ಅಮಿತಾಬ್ ಅವರು ರೀಪೋಸ್ಟ್ ಮಾಡಿದ್ದಾರೆ.

 

ದೆಹಲಿ :
ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಕರುನಾಡಿನ ಕರಾವಳಿಯ ಸುಂದರ ಫೋಟೋಗಳನ್ನು ಹಂಚಿಕೊಂಡು ಇದೀಗ ಸುದ್ದಿಯಾಗಿದ್ದಾರೆ.

ಕುಂದಾಪುರ ಬಳಿಯ ಮರವಂತೆಯ ನಯನ ಮನೋಹರ ಕಡಲಕಿನಾರೆಯ ಫೋಟೋ ಹಂಚಿಕೊಂಡು ಮಾಲ್ಡೀವ್ಸ್ ದೇಶಕ್ಕೆ ಟಾಂಗ್ ನೀಡಿದ್ದಾರೆ. ನಮ್ಮ ದೇಶದಲ್ಲೂ ಸುಂದರ ಕಡಲತೀರ ಇದೆ ಎಂದು ಅವರು ಹೇಳಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ಬಳಿಯ ಪ್ರಸಿದ್ದ ಮರವಂತೆ ಬೀಚ್, ಪಾಂಡಿಚೇರಿಯ ಪ್ಯಾರಡೈಸ್ ಬೀಚ್, ಅಂಡಮಾನ್- ನಿಕೋಬಾರ್ ನೈಲ್ ಮತ್ತು ಹ್ಯಾವಾಕ್ ಬೀಚ್ ಫೋಟೋಗಳನ್ನು ಸೆಹ್ವಾಗ್ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಹಲವರು ಸುಂದರವಾದ ಸ್ಥಳಗಳಿವೆ. ಈ ತಾಣಗಳಿಗೆ ಮೂಲ ಸೌಕರ್ಯ ಒದಗಿಸಿದರೆ ಯಾವುದಕ್ಕೂ ಕಡಿಮೆ ಇಲ್ಲ, ಪರಿಸ್ಥಿತಿಯನ್ನು ಅವಕಾಶವಾಗಿ ಪರಿವರ್ತಿಸುವುದು ಭಾರತಕ್ಕೆ ತಿಳಿದಿದೆ. ಹಲವರು ಭಾರತ ಹಾಗೂ ಪ್ರಧಾನ ಮಂತ್ರಿಯನ್ನು ನಿಂದಿಸಿರುವ ಈ ಸಂದರ್ಭವನ್ನು ಉತ್ತಮ ಅವಕಾಶವಾಗಿ ಬಳಸಿಕೊಂಡು ನಮ್ಮ ಸುಂದರ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯ ನೀಡಿ ಆರ್ಥಿಕತೆಯ ವೇಗ ಹೆಚ್ಚಿಸಬೇಕು ಎಂದು ಅವರು ಬರೆದುಕೊಂಡಿದ್ದಾರೆ.

ಉಡುಪಿ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಉಡುಪಿ ನಿಜಕ್ಕೂ ಅದ್ಭುತ. ಅತ್ಯಂತ ಸುಂದರ ಕಡಲತೀರ. ಪ್ರಾಚೀನ ದೇವಾಲಯ ಹಾಗೂ ಅತ್ಯುತ್ತಮ ಆಹಾರದಿಂದ ಉಡುಪಿ ಅಚ್ಚುಮೆಚ್ಚು ಎಂದು ಹೇಳಿದ್ದಾರೆ.

ವೀರೇಂದ್ರ ಸೆಹ್ವಾಗ್ ಹಾಕಿರುವ ಎಕ್ಸ್ ನಲ್ಲಿ ಹಾಕಿರುವ ಮರವಂತೆಯ ಬೀಚ್ ಕುರಿತ ಬರಹಕ್ಕೆ ಒಟ್ಟು 13,000ಕ್ಕೂ ಹೆಚ್ಚು ಜನ ಅನುಮೋದಿಸಿದ್ದು, 75 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಬಹುತೇಕ ಉತ್ತರ ಭಾರತದ ಜನ ಸೆಹ್ವಾಗ್ ಅವರ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದು ದಕ್ಷಿಣ ಭಾರತದ ಸುಂದರ ತಾಣಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಈ ಭಾಗಗಳನ್ನು ನೋಡುವಂತಿದೆ ಎಂದು ಅದ್ಭುತವಾದ ಪ್ರತಿಕ್ರಿಯೆ ನೀಡಿದ್ದಾರೆ.

ಅಮಿತಾಬ್ ಬಚ್ಚನ್ ಬೆಂಬಲ : ವೀರೇಂದ್ರ ಸೆಹ್ವಾಗ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಅವರು ಹಂಚಿಕೊಂಡಿರುವ ಚಿತ್ರಗಳಿಗೆ ಹೆಸರಾಂತ ನಟ ಅಮಿತಾಬ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ. ನೀವು ಹೇಳುತ್ತಿರುವುದು ಸರಿಯಾಗಿದೆ. ಇದು ಸೂಕ್ತ ಸಮಯ. ನಮ್ಮ ಪ್ರವಾಸಿ ಸ್ಥಳಗಳೇ ಅತ್ಯುತ್ತಮವಾಗಿವೆ. ನಾನು ಅಂಡಮಾನ್ ಮತ್ತು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೇನೆ. ಅವು ತುಂಬ ಸುಂದರವಾದ ಸ್ಥಳಗಳು. ಅಲ್ಲಿನ ಅಂಡರ್‌ವಾಟರ್‌ ಅನುಭವ ತುಂಬ ಚೆನ್ನಾಗಿದೆ ಎಂದಿದ್ದಾರೆ.

ಈ ಟ್ವಿಟ್ ವೈರಲ್ ಆಗುತ್ತಲೇ ಸೋಷಿಯಲ್ ಮೀಡಿಯಾಗಳಲ್ಲಿ ಮರವಂತೆ ಬೀಚ್ ಬಗ್ಗೆಯೂ ಹುಡುಕಾಟ ಜೋರಾಗಿದೆ. ಮರವಂತೆಯ ಬಗ್ಗೆ ಗೊತ್ತಿಲ್ಲದ ಹೊರ ರಾಜ್ಯಗಳವರು ಇಲ್ಲಿಯ ಬೀಚ್ ಬಗ್ಗೆ ಸರ್ಚ್ ಮಾಡುತ್ತಿದ್ದಾರೆ.

ಇನ್ನೊಂದೆಡೆ, ಅಕ್ಷಯ್ ಕುಮಾರ್ ಕಂಗನಾ ರಣಾವತ್, ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಲಕ್ಷದ್ವೀಪಕ್ಕೆ ವೆಲ್‌ಕಮ್ ಟ್ರೆಂಡ್ ಶುರು ಮಾಡಿದ್ದಾರೆ.