ಮುಂಬೈ: ತೀವ್ರ ಜಿದ್ದಾಜಿದ್ದಿ ಕಣವಾಗಿದ್ದ ಮುಂಬೈ ವಾಯವ್ಯ ಕ್ಷೇತ್ರದಲ್ಲಿ ಮರು ಮತ ಎಣಿಕೆ ಬಳಿಕ ಶಿವಸೇನೆ ಶಿಂಧೆ ಬಣದ ಅಭ್ಯರ್ಥಿ ರವೀಂದ್ರ ವೈಕರ್‌ ಕೇವಲ 48 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮರು ಮತ ಎಣಿಕೆ ಬಳಿಕ 4,52,596 ಮತಗಳನ್ನು ಪಡೆದ ವೈಕರ್‌ 48 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇದು ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸಾಧಿಸಿದ ಗೆಲುವುಗಳಲ್ಲಿ ಒಂದಾಗಿದೆ.

ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ 4,52,596 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಇದನ್ನೂ ಓದಿ: ನಾಗಾಲ್ಯಾಂಡ್‍ನಲ್ಲಿ 20 ವರ್ಷಗಳ ಬಳಿಕ ಗೆಲುವು ಸಾಧಿಸಿ ಇತಿಹಾಸ ಬರೆದ ಕಾಂಗ್ರೆಸ್
ಮತ ಎಣಿಕೆ ವೇಳೆ ಭಾರೀ ಹೈಡ್ರಾಮಾ:
ಮೊದಲು ನಡೆದ ಮತ ಎಣಿಕೆ ಪ್ರಕ್ರಿಯೆ ನಂತರ ಅಮೋಲ್‌ ಕೀರ್ತಿಕರ್‌ ಅವರು 2,000 ಮತಗಳಿಂದ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಗಿತ್ತು. ಈ ವೇಳೆ ಪ್ರತಿಸ್ಪರ್ಧಿ ವೈಕರ್‌ ಮರು ಮತ ಎಣಿಕೆಗೆ ಒತ್ತಾಯಸಿ ಹೈಡ್ರಾಮಾ ಸೃಷ್ಟಿಸಿದರು. ಮರು ಮತ ಎಣಿಕೆ ನಂತರ 48 ಮತಗಳ ಅಂತರದಿಂದ ವೈಕರ್‌ ಗೆಲುವು ತನ್ನದಾಗಿಸಿಕೊಂಡರು.