
ಬೆಳ್ವೆ: ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಗುಜರಿ ಮಾರಾಟದಲ್ಲಿ ನಡೆದ ಅವ್ಯವಹಾರದಲ್ಲಿ ಹಿಂದಿನ ಆಡಳಿತದೊಂದಿಗೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದು ತನಿಖೆ ವಿಳಂಬವಾಗುತ್ತಿದ್ದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ರೈತ ಸಂಘದಿಂದ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಳಿ ನಡೆಯುತ್ತಿರುವ ೧೬ ನೇ ದಿನದ ಆಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ರೈತರು ಭಾನುವಾರ ಬೆಂಬಲಿಸಿದರು.
ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ನೇತ್ರತ್ವದಲ್ಲಿ ಸಹಕಾರಿ ಸಂಘದ ನಿರ್ದೇಶಕರುಗಳು, ಸಹಕಾರಿ ಧುರೀಣರು,ರೈತ
ಮುಖಂಡರು,ಸದಸ್ಯರು,
ಗೋಳಿಯಂಗಡಿ, ಹಾಲಾಡಿ, ಬಿದ್ಕಲ್‌ಕಟ್ಟೆ, ಸಾಯಿಬರಕಟ್ಟೆ, ಬಾರ್ಕೂರು ಪೇಟೆ ಸರ್ಕಲ್‌ಗಳಲ್ಲಿ ಹಾಗೂ ಬ್ರಹ್ಮಾವರ ಬಸ್ಸು ತಂಗುದಾಣದಲ್ಲಿ ಚಂಡೆ ಬಾರಿಸಿ ಪ್ರತಿಭಟಿಸಿ, ಬ್ರಹ್ಮಾವರ ಸಕ್ಕರೆ
ಕಾರ್ಖಾನೆ ಬಳಿ ನಡೆಯುತ್ತಿರುವ ೧೬ ನೇ ದಿನದ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾನುವಾರ ಪಾಲ್ಗೊಂಡರು.