ಕಲಬುರ್ಗಿ: ಆಳಂದ ತಾಲೂಕು ಬಂಗರಗಾ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು (43) ಕಾರು ಅಪಘಾತದಲ್ಲಿ ವಿಧಿವಶರಾಗಿದ್ದಾರೆ. ಸೋಮವಾರ ಸಂಜೆ ಆಳಂದ ಪಟ್ಟಣದಲ್ಲಿ ಸಂಭವಿಸಿದ ಕಾರುಗಳ ನಡುವಿನ ಮುಖಮುಖಿ ಅಪಘಾತದಲ್ಲಿ ಸ್ವಾಮೀಜಿ ವಿಧಿವಶರಾಗಿದ್ದು ಮತ್ತು ಕಿನ್ನಿ ಸುಲ್ತಾನ್ ಗ್ರಾಮದ ಮಠಾಧೀಶ ಶಾಂತಲಿಂಗ ಶಿವಾಚಾರ್ಯರು ಸ್ವಾಮೀಜಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದುರಿನ ಇನ್ನೊಂದು ಕಾರಿನಲ್ಲಿ ಇದ್ದವರ ಪೈಕಿ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.