ಬೆಳಗಾವಿ :.
ನ್ಯಾಯಾಲಯಕ್ಕೆ ವಿಚಾರಣೆಗೆ ಕರೆತಂದಿದ್ದ ಆರೋಪಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಘಟನೆ ಇಂದು ನಡೆದಿದೆ.
ಕಳ್ಳತನ ಪ್ರಕರಣದಲ್ಲಿ ಬೆಳಗಾವಿಯ ಹಲವು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಅಬ್ದುಲ್ ಗನಿ ಶಬ್ಬೀರ್ ಶೇಕ್ ಬೆಳಗಾವಿ ಜೆಎಂಎಫ್ ಸಿ ನ್ಯಾಯಾಲಯದ ಆವರಣದಿಂದ ಪರಾರಿಯಾಗಿದ್ದಾನೆ. ಪೋಲಿಸರ ಸಮ್ಮುಖದಲ್ಲಿಯೇ ಆರೋಪಿ ಅವರ ಕಣ್ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಟಿಳಕವಾಡಿ ಪೊಲೀಸರು ಪ್ರಕರಣ ಒಂದರ ವಿಚಾರಣೆಗೆ ಆತನನ್ನು ಕರೆತಂದಿದ್ದ ವೇಳೆ ಅಲ್ಲಿದ್ದ ಜನರ ನಡುವೆ ಆತ ಓಡಿ ನಾಪತ್ತೆಯಾಗಿದ್ದಾನೆ. ಪೊಲೀಸರು ಇದೀಗ ಎಲ್ಲೆಡೆ ಆತನ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ.