ಮಹಿಳೆಯೊಬ್ಬಳು 27 ಬಾರಿ ಗರ್ಭಿಣಿಯಾಗಿ 69 ಮಕ್ಕಳನ್ನು ಹೆತ್ತು ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರವಾಗಿದ್ದರು. 27 ಬಾರಿ ಗರ್ಭಿಣಿಯಾಗಿದ್ದು 69 ಮಕ್ಕಳನ್ನು ಹೆತ್ತಿದ್ದಾರೆ, ಅದರಲ್ಲಿ 16 ಅವಳಿ ಮಕ್ಕಳು 7 ಬಾರಿ ತ್ರಿವಳಿ ಮಕ್ಕಳು ಜನಿಸಿದ್ದಾರೆ. ಇಷ್ಟೇ ಅಲ್ಲ ನಾಲ್ಕು ಬಾರಿ ಒಟ್ಟಿಗೆ ನಾಲ್ಕು ಮಕ್ಕಳು ಜನಿಸಿದ್ದಾರೆ.

27 ಬಾರಿ ಗರ್ಭಿಣಿಯಾಗಿ 69 ಮಕ್ಕಳನ್ನು ಹೆತ್ತು ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.

ಇಂದಿನ ದಿನಗಳಲ್ಲಿ ಮಗುವನ್ನು ಬೆಳೆಸುವುದು ತುಂಬಾ ಕಷ್ಟಕರ ಸಂಗತಿ, ಒಂದು ಮಗುವನ್ನು ಹೆತ್ತು ಅದರ ಬೇಕು ಬೇಡಗಳನ್ನು ನೋಡಿಕೊಂಡು ದೊಡ್ಡವರನ್ನಾಗಿ ಮಾಡುವವರೆ ಸಾಕಪ್ಪಾ ಸಾಕು ಎಂದೆನಿಸುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಬರೋಬ್ಬರಿ 69 ಮಕ್ಕಳನ್ನು ಹೆತ್ತು ಗಿನ್ನಿಸ್ ದಾಖಲೆ ಗೆ ಪಾತ್ರರಾಗಿದ್ದರು. 27 ಬಾರಿ ಗರ್ಭಿಣಿಯಾಗಿದ್ದು 69 ಮಕ್ಕಳನ್ನು ಹೆತ್ತಿದ್ದಾರೆ, ಅದರಲ್ಲಿ 16 ಅವಳಿ ಮಕ್ಕಳು 7 ಬಾರಿ ತ್ರಿವಳಿ ಮಕ್ಕಳು ಜನಿಸಿದ್ದಾರೆ. ಇಷ್ಟೇ ಅಲ್ಲ ನಾಲ್ಕು ಬಾರಿ ಒಟ್ಟಿಗೆ ನಾಲ್ಕು ಮಕ್ಕಳು ಜನಿಸಿದ್ದಾರೆ.

ಇದು ಕಥೆಯಲ್ಲ ಮಹಿಳೆಯೊಬ್ಬರು 69 ಮಕ್ಕಳಿಗೆ ಜನ್ಮ ನೀಡಿ ಗಿನ್ನಿಸ್ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ಗೆ ಸೇರ್ಪಡೆಯಾಗಿದ್ದಾರೆ.
ರಷ್ಯಾದ ಶುಯಾ ಪ್ರದೇಶದ ನಿವಾಸಿಯಾಗಿದ್ದು ಅವರ ಹೆಸರು ವ್ಯಾಲೆಂಟಿನಾ ವ್ಯಾಸೆಲಿನಾ. ವೈದ್ಯಕೀಯ ವಿಜ್ಞಾನದ ಪ್ರಕಾರ, ಇಲ್ಲಿಯವರೆಗೆ ಯಾರೂ 16 ಕ್ಕಿಂತ ಹೆಚ್ಚು ಮಕ್ಕಳನ್ನು ಹೆತ್ತಿಲ್ಲ. ಆದುದರಿಂದ ಮಹಿಳೆಯೊಬ್ಬಳು ಇಷ್ಟೊಂದು ಮಕ್ಕಳಿಗೆ ಜನ್ಮ ನೀಡುತ್ತಾಳೆ ಎಂಬ ಕಲ್ಪನೆಗೆ ನಿಲುಕದ್ದಾಗಿದೆ.

ಫಿಯೋಡರ್ ವಾಸಿಲೀವ್ ಅವರ ಪತ್ನಿ 1725 ಮತ್ತು 1765 ರ ನಡುವೆ 27 ಬಾರಿ ಗರ್ಭಿಣಿಯಾದರು. ಒಂದೇ ಮಹಿಳೆಯ ಗರ್ಭದಿಂದ ಒಟ್ಟು 69 ಮಕ್ಕಳು ಜನಿಸಿದವು. ಫಿಯೋಡರ್ ವಾಸಿಲೀವ್ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾರೆ. ಅವರೂ ಕೂಡ ಅಲ್ಲದೇ 8 ಬಾರಿ ಗರ್ಭಿಣಿಯಾಗಿ 18 ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಈ ಪೈಕಿ 6 ಬಾರಿ ಅವಳಿ ಮಕ್ಕಳು ಜನಿಸಿದ್ದಾರೆ. ಈ ರೀತಿ ನೋಡಿದರೆ ವಾಸಿಲೀವ್ ಅವರ ಇಬ್ಬರು ಹೆಂಡತಿಯರಿಗೆ ಒಟ್ಟು 87 ಮಕ್ಕಳು ಜನಿಸಿದರು. ಅವರಲ್ಲಿ 84 ಮಂದಿ ಜೀವಂತವಾಗಿ ಉಳಿದಿದ್ದಾರೆ ಎಂದು ಹೇಳಲಾಗುತ್ತದೆ, ಉಳಿದ 7 ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದವು.

ಆದರೆ ಮೊದಲ ಹೆಂಡತಿಯ ಹೆಸರು ವ್ಯಾಲೆಂಟಿನಾ ವಾಸಿಲೀವ್ ಮತ್ತು ಅವಳು 76 ವರ್ಷಗಳ ಕಾಲ ಬದುಕಿದ್ದರು ಎನ್ನಲಾಗಿದೆ ಎರಡನೇ ಪತ್ನಿಯ ಹೆಸರು ಬಹಿರಂಗಗೊಂಡಿಲ್ಲ.

ಮಹಿಳೆ 60ಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಸಾಧ್ಯವೇ?
ವಿಜ್ಞಾನಿಗಳು ಇಂದಿಗೂ ಇದನ್ನು ನಂಬುವುದಿಲ್ಲ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಂತಾನೋತ್ಪತ್ತಿ ವಿಭಾಗದ ನಿರ್ದೇಶಕ ಜೇಮ್ಸ್ ಸೆಗರ್ಸ್ ಪ್ರಕಾರ, ಇದು ಸಾಧ್ಯವಿಲ್ಲ. ಮೊದಲನೆಯದಾಗಿ, 40 ವರ್ಷಗಳಲ್ಲಿ ಮಹಿಳೆ 27 ಬಾರಿ ಗರ್ಭಿಣಿಯಾಗುವುದು ಹೇಗೆ ಎಂದು ಯೋಚಿಸಿ ಎಂದಿದ್ದಾರೆ.