ಬೆಳಗಾವಿ: ರಾಯಬಾಗ ಹೊರವಲಯದ ಜಮೀನಿನಲ್ಲಿ ಗುರುವಾರ ಕೃಷಿ ಕೆಲಸದಲ್ಲಿ ತೊಡಗಿದ್ದ ಶೋಭಾ ಕೃಷ್ಣ ಕುಲಗುಡೆ( 43) ಎಂಬುವವರು ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಲ್ಲಪ್ಪ ಶಂಕರ ಮೇತ್ರಿ( 32), ಭಾರತಿ ಕೆಂಪಣ್ಣ ಕಮತೆ(32), ಬಾಬುರಾವ್ ಅಶೋಕ ಚವಾಣ್( 30) ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.