| Latest Version 9.0.7 |

Local News

ಕಟೀಲು ಯಕ್ಷಗಾನ ಮೇಳಕ್ಕೆ 7ನೇ ಸೆಟ್ ಮುಕುಟ : ಇಂದು ಬಜಪೆಯಿಂದ ಕಟೀಲು ವರೆಗೆ ಏಳೂ ಮೇಳಗಳ ದೇವರು, ಪರಿಕರಗಳ ಭವ್ಯ ಮೆರವಣಿಗೆ

 

ಕಟೀಲು :
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೇ ಮೇಳದ ಉದ್ಘಾಟನಾ ಸಮಾರಂಭ ಭಾನುವಾರ ಜರುಗಲಿದೆ. ಶನಿವಾರ ಬಜಪೆಯಿಂದ ಶ್ರೀ ಕ್ಷೇತ್ರ ಕಟೀಲಿಗೆ ವೈಭವದ ಮೆರವಣಿಗೆ ನಡೆಯಲಿದೆ. ಸಂಜೆ ಕ್ಕೆ ಬಜಪೆ ಶಾರದಾ ಮಂಟಪದಿಂದ ಸ್ತಬ್ದಚಿತ್ರಗಳಲ್ಲಿ ಕಟೀಲು ಏಳೂ ಮೇಳಗಳ ದೇವರು ಹಾಗೂ ಪರಿಕರಗಳ ಮೆರವಣಿಗೆಗೆ ಚಾಲನೆ ಪಡೆದು ಎಕ್ಕಾರಿನವರೆಗೆ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬರಲಿದೆ. ಮೆರವಣಿಗೆಯಲ್ಲಿ 16 ಭಜನಾ ತಂಡಗಳು ಭಾಗವಹಿಸಲಿವೆ.

ಮೂಡುಬಿದಿರೆ, ಕಲ್ಲಮುಂಡೂರು, ಪೊಳಲಿ ಕಾಜಿಲ,ಕಿನ್ನಪದವು ಬಜಪೆ, ಪೊರ್ಕೋಡಿ, ಕೊಂಚಾರು, ಗುರುಪುರ, ಪೆರಾರ, ಬಂಗೇರ ಪದವು, ಮಂಜೇಶ್ವರ, ಗಂಜಿಮಠ ಈಶ್ವರ ಕಟ್ಟೆ ಸ್ವಾಮಿಲ ಪದವು, ಬಜಪೆ, ಪೆರ್ಮುದೆ ತಂಡಗಳು ಭಾಗವಹಿಸಲಿವೆ.

ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ಅಲಂಕಾರ ಮಾಡಲಾಗಿದೆ. ಮೆರವಣಿಗೆಯಲ್ಲಿ, ಟ್ಯಾಬ್ಲೊಗಳು, 30 ಕೊಂಬು, ಕೀಲು ಕುದುರೆ, ಬೇತಾಳ, ಹುಲಿ ವೇಷಗಳು ಇರಲಿವೆ.

ನಾಳೆ ಮೇಳ ಲೋಕಾರ್ಪಣೆ: ಭಾನುವಾರ ಬೆಳಗ್ಗೆ
10.30ಕ್ಕೆ ಪೂಜಾ ಕಿರೀಟಗಳ ಸ್ಥಾಪನೆ, ಆವಾಹನೆ. ಸಂಜೆ 3ಕ್ಕೆ ತಾಳಮದ್ದಲೆ, ಸಂಜೆ 5ಕ್ಕೆ ಗೆಜ್ಜೆ ಕಟ್ಟುವುದು. ಮೇಳಗಳ ಆರಂಭದ ವಿಧಿವಿಧಾನಗಳು ನಡೆಯಲಿವೆ. ಸಂಜೆ 6ಕ್ಕೆ ಏಳನೆಯ ಮೇಳದ ಉದ್ಘಾಟನೆ ಜರಗಲಿದೆ.

ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಉದ್ಘಾಟನೆ ನೆರವೇರಿಸುವರು. ಫಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅಧ್ಯಕ್ಷತೆ
ವಹಿಸುವರು.
ಮೇಳಗಳ ತಿರುಗಾಟಕ್ಕೆ ಚಾಲನೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃ ತಿ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್, ಸಂಸದ ಬ್ರಿಜೇಶ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್, ಡಿ.ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ವೈ, ರಾಜೇಶ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಕಿಶೋರ್
ಕುಮಾರ್, ಎಸ್. ಎಲ್. ಭೋಜೇ ಗೌಡ, ಐವನ್ ಡಿಸೋಜಾ, ಮಾಜಿ ಸಚಿವರಾದ ಬಿ. ರಮಾನಾಥ ರೈ. ಕೆ. ಅಭಯಚಂದ್ರ ಜೈನ್, ಮಾಜಿ ಸಂಸದ ನಳಿನ್ ಕುಮಾರ್‌ಕಟೀಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ರಾಜ್ಯ ಉಚ್ಚ ನ್ಯಾಯಾಲಯದ ಡೆಸಿಗ್ರೇಟೆಡ್ ಸೀನಿಯರ್ ಆಡ್ವೋಕೇಟ್ ಪಿ.ಎಸ್. ರಾಜಗೋಪಾಲ್, ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ, ಅರ್ಚಕರಾದ ಲಕ್ಷ್ಮಿ ನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಅಸ್ರಣ್ಣ ಉಪಸ್ಥಿತರಿರುವರು.

ಯಕ್ಷಗಾನ ಪ್ರಿಯೆ ಭ್ರಮರಾಂಬಿಕೆ…

ಕಟೀಲು ಶ್ರೀ ಮರ್ಗಾ ಪರಮೇಶ್ವರಿ ದೇವಳವು ಯಕ್ಷಗಾನ, ವಿದ್ಯಾದಾನ ಹಾಗೂ ಅನ್ನದಾನದ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಭ್ರಮರಾಂಬೆ ಕಟೀಲು ದುರ್ಗೆಗೆ ಯಕ್ಷಗಾನ ಸೇವೆ ಅತೀ ಪ್ರೀತಿ.

ಕಟೀಲು ಆರು ಮೇಳಗಳಿದ್ದು ಸುಮಾರು 20 ವರ್ಷಗಳವರೆಗೆ ಸೇವೆ ಆಡಗಳ ಸೇವೆ ಬುಕ್ಕಿಂಗ್ ಆಗಿದೆ.

ಕಟೀಲು ಯಕ್ಷಗಾನ ಮಂಡಳಿ ಆರಂಭದ ಕಾಲಮಾನ ಬಗ್ಗೆ ಖಚಿತ ದಾಖಲೆ ಕಂಡು ಬಂದಿಲ್ಲ. 200 ವರ್ಷಕ್ಕೂ ಹೆಚ್ಚಿನ ಇತಿಹಾಸ ಇದೆ. 2 ನೇ ಮೇಳವು 1970ರಲ್ಲಿ, 3ನೇ ಮೇಳವು 1982ರಲ್ಲಿ, 4ನೇ ಮೇಳ 1990ರಲ್ಲಿ, 5 ನೇ ಮೇಳ 2010ರಲ್ಲಿ, 6 ನೇ ಮೇಳ 2013ರಲ್ಲಿ ಹಾಗೂ ಇದೀಗ ಪ್ರಸ್ತುತ 2025-26 ತಿರುಗಾಟದಲ್ಲಿ ನ.16ರಿಂದ ಏಳನೇ ಮೇಳ ಆರಂಭವಾಗಲಿದೆ.

ಕಮಲಾದೇವೀಪ್ರಸಾದ,
ಶ್ರೀಹರಿನಾರಾಯಣದಾಸ ಆಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಹಾಗೂ ಅನುವಂಶಿಕ ಮೊಕ್ತೇಸರ ಸನತ್ ಕುಮಾರ್‌ಶೆಟ್ಟಿ ಕೊಡತ್ತೂರುಗುತ್ತು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಕಿತೋರ್‌ ಶೆಟ್ಟಿ ಕೊಡೆತ್ತೂರುಗುತ್ತು, ಪ್ರವೀಣದಾಸ್ ಭಂಡಾರಿ, ಕೊಡೆತ್ತೂರುಗುತ್ತು, ಬಿಪಿನ್‌ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ತಿಬಾರ ಗುತ್ತಿನಾರ್ ಉಮೇಶ್ ಎನ್. ಶೆಟ್ಟಿ, ಶ್ರೀ ಕೊಡಮಣಿತ್ತಾಯ ಕ್ಷೇತ್ರ, ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಯಾಡಿ ದೇವೀ ಪ್ರಸಾದ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ತಿರುಗಾಟ ಆರಂಭೋತ್ಸವ ರಾತ್ರಿ 8.30 ಕ್ಕೆ 7 ಮೇಳಗಳ ದೇವರ ಪೂಜೆ ನಡೆದು ಕಟೀಲು ರಥ ಬೀದಿಯಲ್ಲಿ ಒಂದೇ ವೇದಿಕೆಯಲ್ಲಿ ರಂಗ ಸ್ಥಳಗಳಲ್ಲಿ ‘ಪಾಂಡವಾಶ್ವಮೇಧ’ ಯಕ್ಷಗಾನ ಬಯಲಾಟದ ಮೂಲಕ ನಡೆಯಲಿದೆ.

Team Udayaprabha
";