| Latest Version 9.0.7 |

National News

ನೇಪಾಳದ ನೋಟುಗಳಲ್ಲಿ ಭಾರತಕ್ಕೆ ಸೇರಿದ ಪ್ರದೇಶಗಳ ಸೇರ್ಪಡೆ

 

ಕಾಠ್ಮಂಡು: ನೇಪಾಳದ ಕೇಂದ್ರೀಯ ಬ್ಯಾಂಕ್ 100 ರು.
ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ಭಾರತದ 3 ಸ್ಥಳಗಳನ್ನು ಒಳಗೊಂಡ ನಕ್ಷೆ ಬಳಸಲಾಗಿದೆ. ದೇಶದ ಪರಿಷ್ಕೃತ ನಕ್ಷೆ ಹಾಕಿದ್ದು, ವಿವಾದಾತ್ಮಕ ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾ ಧುರಾ ಪ್ರಾಂತ್ಯಗಳನ್ನು ಸೇರಿಸಿದೆ. ಹಿಂದಿನ ಪ್ರಧಾನಿ ಕೆ ಪಿ ಶರ್ಮಾ ಓಲಿ ಅವಧಿಯಲ್ಲಿ ನೇಪಾಳ ನಕ್ಷೆ ಪರಿಷ್ಕೃ ತಗೊಂಡಿದೆ. 100 ರು. ನೋಟಿನಲ್ಲಿ ಈ ಪ್ರದೇಶಗಳು ಸೇರಿವೆ ಎಂದು ಎನ್ ಆರ್‌ಬಿ ವಕ್ತಾರ ಸ್ಪಷ್ಟಪಡಿಸಿದ್ದಾರೆ.

Team Udayaprabha
";