| Latest Version 9.0.7 |

National News

ಬಾಳೆಎಲೆಯಲ್ಲಿ ಸಾಂಪ್ರದಾಯಿಕ ಅನ್ನದಾನ- ಶಬರಿಮಲೆ ಭಕ್ತರಿಗೆ ಪಲಾವ್ ಬದಲು ಊಟಕ್ಕೆ ದೇಸಿ ಖಾದ್ಯ

 

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೊಂದು ಸಿಹಿ
ಸುದ್ದಿ. ಈ ಬಾರಿ ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರಿಗೆ ಪಲಾವು, ಸಾಂಬಾರ್ ರೂಪದಲ್ಲಿ ನಡೆಯುತ್ತಿದ್ದ ಅನ್ನದಾನ ಕೈಬಿಟ್ಟು ಬಿಸಿಬಿಸಿ ಪಾಯಸ, ಕುರುಕುರು ಹಪ್ಪಳ ಹಾಗೂ ಕೇರಳದ ಸಾಂಪ್ರದಾಯಿಕ ಊಟ ಉಣಬಡಿಸಲು ತಿರುವಾಂಕೂರು ದೇವಸ್ತಂ ಮಂಡಳಿ ತೀರ್ಮಾನಿಸಿದೆ.

ಭಕ್ತಿ ಭಾವದಿಂದ ಅಷ್ಟೊಂದು ಎತ್ತರದ ಬೆಟ್ಟ ಹತ್ತಿಳಿಯುವ ಭಕ್ತರು ಕೇರಳದ ಸಾಂಪ್ರದಾಯಿಕ ಹಬ್ಬದೂಟ ನೆನಪಿಸುವ ಪ್ರಸಾದ ರೂಪದ ಭೋಜನಕ್ಕೆ ಅರ್ಹರಾಗಿದ್ದಾರೆ. ಹೀಗಾಗಿ ಅವರಿಗೆ ತುಪ್ಪದ ಸುವಾಸನೆಯುಕ್ತ ಪಾಯಸ, ಹಪ್ಪಳ ಮತ್ತು ಬಾಳೆಎಲೆ ಊಟ ಬಡಿಸಲು ನಿರ್ಧರಿಸಲಾಗಿದೆ. ಈವರೆಗೆ ಅಯ್ಯಪ್ಪನ ಸನ್ನಿಧಾನದಲ್ಲಿ ಅನ್ನದಾನದ ಭಾಗವಾಗಿ ಪಲಾವು ಮತ್ತು ಸಾಂಬಾರ್ ವಿತರಿಸಲಾಗುತ್ತಿತ್ತು. ಮಾಲಾಧಾರಿ ಭಕ್ತರಿಗೆ ಇದನ್ನು ನೀಡುವುದು ಸರಿಯಲ್ಲ. ಅದರ ಬದಲು ಇದೀಗ ಹೊಸದಾಗಿ ಸಿದ್ದಪಡಿಸಲಾಗಿರುವ ಅನ್ನದಾನದ ಮೆನುವು ಸಾಮಾನ್ಯವಾಗಿ ಕೇರಳದಲ್ಲಿ ಭಕ್ತರಿಗೆ ವಿತರಿಸುವ ಪ್ರಸಾದದ ಮಾದರಿಯಲ್ಲಿರಲಿದೆ.

Team Udayaprabha
";