| Latest Version 9.0.7 |

National News

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯಿಂದ ಸೋನಿಯಾ ಗಾಂಧಿಗೆ ಟಿಕೆಟ್

 

ತಿರುವನಂತಪುರ: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ‘ಸೋನಿಯಾ ಗಾಂಧಿ’ ಹೆಸರಿನ ಮಹಿಳೆಗೆ ಬಿಜೆಪಿ ಟಿಕೆಟ್‌ ನೀಡಿದೆ. ಇದು ಎಲ್ಲರ ಗಮನ ಸೆಳೆದಿದೆ. ಮುನ್ನಾರ್‌ ಪಂಚಾಯತ್‌ ಚುನಾವಣೆಯಲ್ಲಿ ಸೋನಿಯಾಗೆ ಟಿಕೆಟ್‌ ಲಭಿಸಿದೆ.

ಸೋನಿಯಾ ಅವರ ತಂದೆ ಕಾಂಗ್ರೆಸ್‌ ಕಾರ್ಯಕರ್ತರು. ಈ ಕಾರಣಕ್ಕಾಗಿ ತಮ್ಮ ಮಗಳಿಗೆ ಸೋನಿಯಾ ಎಂದು ಹೆಸರಿಟ್ಟಿದ್ದರು. ಆದರೆ ಸೋನಿಯಾ ಅವರ ಪತಿ ಬಿಜೆಪಿ ಕಾರ್ಯಕರ್ತರಾದ ಕಾರಣ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಲಭಿಸಿದೆ. ಸೋನಿಯಾ ಗಾಂಧಿ ಎಂಬ ಹೆಸರು ಜನರನ್ನು ಸೆಳೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಂಜುಳಾಗೆ ಸೋಲಿನ ಭಯ ಎದುರಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

Team Udayaprabha
";