ನಾಂದೇಂಡ್ : ಮಹಾರಾಷ್ಟ್ರದ ನಾಂದೇಡ್ನಲ್ಲಿ ವರನ ಕುಟುಂಬವು ಮದುವೆಯ ಉಡುಗೊರೆಯಾಗಿ ತಮ್ಮ ಇಡೀ ಗ್ರಾಮದ ನಾಗರಿಕರಿಗೆ ತಲಾ 1 ಲಕ್ಷ ರೂ.ಗಳ ಅಪಘಾತ ವಿಮೆ ಮಾಡಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲೆಯ ಬಹಾದ್ದೂರಪುರ ಗ್ರಾಮದಲ್ಲಿ ಸಿದ್ದೇಶ್ವರ್ ಪೇಠ್ಕರ್ ಮತ್ತು ಮಂಜುಷಾ ಅವರ ವಿವಾಹ ಇತ್ತೀಚೆಗೆ ನೆರವೇರಿದೆ. ಈ ವೇಳೆ, ವರನ ಮನೆಯವರು ಊರಿನಲ್ಲಿರುವ ಎಲ್ಲ 3465 ಕುಟುಂಬಗಳಿಗೂ ತಲಾ 1 ಲಕ್ಷ ರೂ.ಗಳಂತೆ ಅಪಘಾತ ವಿಮೆಯನ್ನು ಮಾಡಿಸಿ, ಇದಕ್ಕಾಗಿ ಒಟ್ಟಾರೆ 33.6 ಕೋಟಿ ರೂ. ವೆಚ್ಚ ಮಾಡಿದೆ.
ಮದುವೆಗೆ ಬಂದ ಅತಿಥಿಗಳಿಗೆ ರಿಟರ್ನ್ ಗಿಫ್ಟ್ ಆಗಿ ವಿಮಾ ಯೋಜನೆಯ ಪ್ರತಿಗಳನ್ನು ಹಂಚಿದ್ದಾರೆ. ಊರಲ್ಲಿ ಹಾವು ಕಡಿತ, ಸಿಡಿಲು ಬಡಿದು ಹೆಚ್ಚಿನ ಸಾವುಗಳ ಸಂಭವಿಸುತ್ತವೆ. ಈ ಹಿನ್ನೆಲೆಯಲ್ಲಿ ನಾವು ಅಪಘಾತ ವಿಮೆ ಮಾಡಿಸಲು ನಿರ್ಧರಿಸಿದೆವು ಎಂದು ಕುಟುಂಬ ಹೇಳಿದೆ.


,
,


















