| Latest Version 9.0.7 |

State News

ವಾಲಿಬಾಲ್ ಪಂದ್ಯ: ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿ ಬಾಲಕಿಯರ ತಂಡಕ್ಕೆ ಪ್ರಥಮ, ಬಾಲಕರ ತಂಡಕ್ಕೆ ದ್ವಿತೀಯ

ಹೆಬ್ರಿ: ಶಾಲಾ ಶಿಕ್ಷಣ ಇಲಾಖೆ (ಪದವಿ ಪರ‍್ವ) ವತಿಯಿಂದ ಸರಕಾರಿ ಪದವಿಪರ‍್ವ ಕಾಲೇಜು ಹೆಬ್ರಿಯಲ್ಲಿ ನಡೆದ ಹೆಬ್ರಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಕೂಟದಲ್ಲಿ ಪಿ.ಆರ್.ಎನ್. ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಬಾಲಕರ ವಿಭಾಗದಲ್ಲಿ ಬೆಸ್ಟ್ ಅಲ್ ರೌಂಡರ್ ನಿಯತ್, ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಅಲ್ ರೌಂಡರ್ ಅವನಿ, ಬೆಸ್ಟ್ ಅಟ್ಯಾಕರ್ ಮೋಕ್ಷ ಪ್ರಶಸ್ತಿಯನ್ನು ಪಡೆದರು. ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ದೈಹಿಕ ಶಿಕ್ಷಕಿ ಪಾವನ ಶೆಟ್ಟಿ ಮತ್ತು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

Team Udayaprabha
";