| Latest Version 9.0.7 |

State News

ಹೆಬ್ರಿಯಲ್ಲಿ ಅಮೃತ ಭಾರತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಶೋಭಾಯಾತ್ರೆ 5ಕ್ಕೆ

ಹೆಬ್ರಿ: ಇಲ್ಲಿನ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯ, ವಿದ್ಯಾಕೇಂದ್ರ ಮತ್ತು ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಪ್ರಯುಕ್ತ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.

ಶೋಭಾಯಾತ್ರೆಯು ಹೆಬ್ರಿ ಅನಂತಪದ್ಮನಾಭದೇವಸ್ಥಾನ, ಬಂಟರ ಭವನ ಆಗುಂಬೆ ರಸ್ತೆ ಹೆಬ್ರಿ ಮತ್ತು ಗಜಾನನ ಗೇರುಬೀಜ ಕಾರ್ಖಾನೆ ಕುಚೂರು ರಸ್ತೆಯಿಂದ ಆರಂಭಗೊಳ್ಳಲಿದೆ. 3 ಕಡೆಗಳಿಂದ ಹೊರಡುವ ಮೆರವಣಿಗೆಯು ಹೆಬ್ರಿ ಪೇಟೆಯ ಮುಖ್ಯ ವೃತ್ತದಲ್ಲಿ ಒಟ್ಟಾಗಿ ಸಾಗಲಿದ್ದು, ಹೆಬ್ರಿ ಮುಖ್ಯ ವೃತ್ತದಲ್ಲಿ ಮೊಸರು ಕುಡಿಕೆ ಉತ್ಸವ ನೆರವೇರಿಸಿ, ಶೋಭಾಯಾತ್ರೆಯು ಅಮೃತ ಭಾರತಿ ಕ್ರೀಡಾಂಗಣ ತಲುಪಲಿದೆ.

ಕ್ರೀಡಾಂಗಣದಲ್ಲಿ ನೃತ್ಯ, ಹುಲಿ ವೇಷ, ಯಕ್ಷಗಾನ, ಭಜನೆ, ಕೋಲಾಟ, ಜಾಗಟೆ-ಶಂಖನಾದ, ಮೊಸರು ಕುಡಿಕೆ ನಡೆಯಲಿವೆ ಎಂದು ಅಮೃತ ಭಾರತಿ ಟ್ರಸ್ಟಿನ ಆಡಳಿತ ಮಂಡಳಿ ತಿಳಿಸಿದೆ.

Team Udayaprabha
";