ಬೆಳಗಾವಿ :
ಇಲ್ಲಿಯ ಖಡೇ ಬಜಾರ್ ಪೊಲೀಸರು ಮೂವರು ಅಂತರ ರಾಜ್ಯ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ.
ದಿನಾಂಕ: 18/06/2023 ರಂದು ಫಿರ್ಯಾದಿಯವರು ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ತಮ್ಮ ಟಿವಿಎಸ್ ಅಪಾಚೆ ಆರ್ಟಿಆರ್ ಮೋಟಾರ್ ಸೈಕಲ್ ಕಳ್ಳತನವಾದ ಬಗ್ಗೆ ದೂರು ನೀಡಿದ್ದರ ಮೇರೆಗೆ ಖಡೇಬಜಾರ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 47/2023 ಕಲಂ 379 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.
ದಿನಾಂಕ: 27/11/2023 ರಂದು ಸದರಿ ಪ್ರಕರಣದ ಆರೋಪಿತರಾದ
1. ಮಹೇಶ ನಿಂಗಪ್ಪ ಮಾದರ, ವಯಸ್ಸು: 23 ವರ್ಷ, ಸಾ: ಕುರುಬರದಿನ್ನಿ, ತಾ: ಕೋಲ್ದಾರ, ಹಾಲಿ:
2. ಅಮೀರ ಬಾಬು ಏಳಗಿ, ವಯಸ್ಸು: 19 ವರ್ಷ, ಸಾ: ಅಥರ್ಗಾ, ತಾ: ಇಂಡಿ, ಜಿ: ವಿಜಯಪುರ.
3. ಪ್ರಶಾಂತ ಗೋಪಾಲ ಮೋರೆ, ವಯಸ್ಸು: 21 ವರ್ಷ, ಸಾ: ಅಥರ್ಗಾ, ತಾ: ಇಂಡಿ. ಜಿ: ವಿಜಯಪುರ.
ಇವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಮೋಟಾರ್ ಸೈಕಲ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಲ್ಲದೇ, ಆರೋಪಿತರು ಬೆಳಗಾವಿ, ಅಥಣಿ, ವಿಜಯಪುರ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ಗೋವಾದಲ್ಲಿಯೂ ಮೋಟಾರ್ ಸೈಕಲ್ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿತರಿಂದ 01-ಟಿವಿಎಸ್ ಅಪಾಚೆ ಮೋಟಾರ ಸೈಕಲ್, 02-ಬಜಾಜ್ ಪಲ್ಸರ್ ಎನ್ಎಸ್ ಮೋಟಾರ ಸೈಕಲ್ಗಳು, 05-ಹಿರೋ ಸ್ಟೆಂಡರ್ ಪ್ಲಸ್ ಮೋಟಾರ ಸೈಕಲ್ಗಳು, 02-ಹೊಂಡಾ ಶೈನ್ ಮೋಟಾರ ಸೈಕಲ್ಗಳು, 01-ಬಜಾಜ ಪ್ಲಾಟೀನಾ ಮೋಟಾರ ಸೈಕಲ್ ಮತ್ತು 01-ಹಿರೋ ಸ್ಟೆಂಡರ್ ಪ್ರೋ ಮೋಟಾರ ಸೈಕಲ್ ಹೀಗೆ ಒಟ್ಟು ರೂ.6.79,000/- ಕಿಮ್ಮತ್ತಿನ 14 ಮೋಟಾರ ಸೈಕಲ್ಗಳನ್ನು ವಶಪಡಿಸಿಕೊಂಡಿದ್ದು, ಖಡೇಬಜಾರ ಪೊಲೀಸ್ ಠಾಣೆಯ 04 -ಪ್ರಕರಣಗಳು, ಅಥಣಿ ಪೊಲೀಸ್ ಠಾಣೆಯ-C1 ಪ್ರಕರಣ ಮತ್ತು ಜಲನಗರ ಪೊಲೀಸ್ ಠಾಣೆಯ-01 ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದು ಇನ್ನುಳಿದ ಮೋಟಾರ್ ಸೈಕಲ್ಗಳ ವಾರಸುದಾರರ ಪತ್ತೆ ಕಾರ್ಯ ಮುಂದುವರಿಸಿದ್ದು, ಆರೋಪಿತರಿಗೆ ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸ್ನೇಹ ಪಿ.ವಿ ಉಪ ಪೊಲೀಸ್ ಆಯುಕ್ತರು (ಅಪರಾಧ & ಸಂಚಾರ), ಅರುಣಕುಮಾರ ಕೋಳೂರ ಎಸಿಪಿ ಖಡೇಬಜಾರ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಖಡೇಬಜಾರ ಪೊಲೀಸ್ ಠಾಣೆಯ ಡಿ.ಪಿ ನಿಂಬಾಳಕರ, ಪೊಲೀಸ್ ಇನ್ಸಪೆಕ್ಟರ ರವರ ನೇತೃತ್ವದಲ್ಲಿ ಆನಂದ ಆದಗೊಂಡ ಪಿಎಸ್ಐ, ಸಿಬ್ಬಂದಿ ಜನರಾದ ಎ ಬಿ ಶೆಟ್ಟಿ, ಬಿ ಎಸ್ ರುದ್ರಾಪುರ, ಎಂ.ವಿ. ಅರಳಗುಂಡಿ, ವಿ.ವೈ. ಗುಡಿಮೇತ್ರಿ, ಜಿ ಪಿ ಅಂಬಿ, ಆರ್.ಬಿ.ಗಣಿ, ಪಿ.ಎಸ್.ಮಾದರ ಹಾಗೂ ಬೆಳಗಾವಿ ನಗರ ಟೆಕ್ನಿಕಲ್ ಘಟಕದ ರಮೇಶ ಅಕ್ಕಿ ಮತ್ತು ಎಂ.ಎಸ್. ಕಾಶೀದ ಇವರು ಆರೋಪಿತರ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.
ಈ ಕಾರ್ಯವನ್ನು ಬೆಳಗಾವಿ ನಗರದ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಐ.ಪಿ.ಎಸ್. ರವರು ಶ್ಲಾಘಸಿ ರೂ.10,000/- ಗಳ ಬಹುಮಾನ ಘೋಷಿಸಿದ್ದಾರೆ.