| Latest Version 9.0.7 |

Local News

ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಣೆ ಕಾರ್ಯ ಬಹಳ ಶ್ರಮದಾಯಕವಾದದ್ದು: ಅನಿಲ ಬೆನಕೆ 

 

 

ಬೆಳಗಾವಿ : ಮಹಾಂತೇಶ ನಗರ ರಹವಾಸಿಗಳ ಸಂಘ, ಭಾರತ ಸರ್ಕಾರದ ಅಂಚೆ ಇಲಾಖೆ ಹಾಗೂ ಬೆಳಗಾವಿ ಅಂಚೆಚೀಟಿ ಮತ್ತು ನಾಣ್ಯ ಸಂಗ್ರಹಣಾ ಸಂಘದ ಸಂಯುಕ್ತಾಶ್ರಯದಲ್ಲಿ “ಸಂಚಯ” ಹೆಸರಿನ ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆಯ 3 ದಿನದ ಪ್ರದರ್ಶನ ಕಾರ್ಯಕ್ರಮದ 2 ನೇ ದಿನ ಮಂಗಳವಾರ ಮಹಾಂತೇಶ ನಗರದ ಮಹಾಂತ ಭವನದಲ್ಲಿ ನಡೆಯಿತು.

 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಶಾಸಕ ಅನಿಲ ಬೆನಕೆ ಅವರು ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಣೆ ಬಹಳ ಶ್ರಮದಾಯಕವಾದದ್ದು, ಅಷ್ಟೆ ಸಂತೋಷ ನೀಡುವ ಕೆಲಸ, ಈ ಹೆಸರಿನಲ್ಲಿ ವಂಚನೆ ಮಾಡುವರಿದ್ದಾರೆ. ನಿಜವಾದ ಹವ್ಯಾಸಿಗಳು ಜಾಗೃತ ರಾಗಿರಬೇಕೆಂದು ಹೇಳಿದರು.

 

ಶ್ರೀನಿವಾಸ ಚವ್ಹಾನ ಮುಖ್ಯಸ್ಥರು ಫಿಲಾಟಲ್ ಬ್ಯೂರು ರವರು ಮಾತನಾಡಿ ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಣೆ ಬೆಳೆದು ಬಂದ ಪರಂಪರೆ ಹಾಗೂ ಉದ್ದೇಶ , ಮಹತ್ವವನ್ನು ವಿವರಿಸಿದರು.

 

ಆದೇಶ ಬರಡೆ ರವರು ಮೌರ್ಯ, ಗುಪ್ತ ಸೇರಿದಂತೆ ವಿವಿಧ ಸಾಮ್ರಾಜ್ಯಗಳ ಇತಿಹಾಸವನ್ನು ಈ ಸಂಗ್ರಹಣೆ ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯ ಮಾಡುತ್ತದೆ. ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಲಕ್ಷ್ಮೀಕಾಂತ ಗುರುವ ಅಧ್ಯಕ್ಷರು ಮಹಾಂತೇಶ ನಗರ ರಹವಾಸಿಗಳ ಸಂಘ ರವರು ವಿದ್ಯಾರ್ಥಿಗಳು ವಿವಿಧ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

 

ಮಹಾಂತೇಶ ನಗರ ರಹವಾಸಿಗಳ ಸಂಘದ ಗೌರವ ಕಾರ್ಯದರ್ಶಿ ಸಂಜೀವ ಎಸ್ ಪಟ್ಟಣಶೆಟ್ಟಿ , ಆಡಳಿತ ಮಂಡಳಿ ನಿರ್ದೇಶಕ ವಿ. ಎಂ. ಹೆದ್ದೂರಶೆಟ್ಟಿ, ರಾಜಶೇಖರ ಡೋಣಿ, ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಣಾ ಸಂಘದ ಅಧ್ಯಕ್ಷ ಪ್ರಸಾದ ಹಿರೇಮಠ ಹಾಗೂ ಗಣ್ಯರು , ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

 

ಪ್ರಶಿಕ್ಷಣಾರ್ಥಿ ರುತಿಕಾ ಜಾಲಿಹಾಳ ಪ್ರಾರ್ಥಿಸಿದರು, ಶಿಕ್ಷಕ ಶ್ರೀಕಾಂತ ಪಾಟೀಲ ಸ್ವಾಗತಿಸಿದರು, ಶಿಕ್ಷಕ ಪ್ರತಾಪ ಕುಮಾರ ವಂದಿಸಿದರು, ಪ್ರೊ. ಮಂಜುನಾಥ ಕಲಾಲ ನಿರೂಪಿಸಿದರು.

Team Udayaprabha
";