| Latest Version 9.0.7 |

State News

ಪುನರ್ವಸು ಮಳೆ : ಬೆಳಗಾವಿಯಲ್ಲಿ ವರುಣನ ಆರ್ಭಟ ….!

ಬೆಳಗಾವಿ : ಬೆಳಗಾವಿಯಲ್ಲಿ ಮಳೆಯ ಅಬ್ಬರ ದಿನೇ ದಿನೇ ಹೆಚ್ಚುತ್ತಿದೆ.

ಸತತ ಎರಡು ದಿನಗಳ ಕಾಲ ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ಶಾಲಾ-ಕಾಲೇಜುಗಳಿಗೆ ಮಳೆಯ ಕಾರಣಕ್ಕೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಬುಧವಾರವೂ ಖಾನಾಪುರ ಮತ್ತು ಬೆಳಗಾವಿ ತಾಲೂಕುಗಳಲ್ಲಿ ಜೋರಾಗಿ ಮಳೆ ಆಗಿದೆ. ಜೂನ್ ತಿಂಗಳಿನಲ್ಲಿ ಮಳೆಯ ತೀವ್ರ ಕೊರತೆ ಕಾಣಿಸಿಕೊಂಡಿತ್ತು. ಆದರೆ ಜುಲೈ ತಿಂಗಳಿನಲ್ಲಿ ಧಾರಾಕಾರವಾಗಿ ಮಳೆ ಆಗುತ್ತಿರುವುದು ಸಂತಸದ ಸಂಗತಿಯಾಗಿದೆ.

ಇದೇ ರೀತಿ ಮಳೆ ಮುಂದುವರಿಕೆಯಾದರೆ ಕುಡಿಯುವ ನೀರಿನ ಹಾಜಾಕಾರ ತಪ್ಪಬಹುದು. ಜೊತೆಗೆ ಉತ್ತಮ ಕೃಷಿ ಚಟುವಟಿಕೆಗಳು ನಡೆಯಬಹುದು ಎಂಬ ನಿರೀಕ್ಷೆ ಇದೆ.

Team Udayaprabha
";