ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ,ಗಡಿವಿವಾದ ಪರಿಹಾರಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಅಂಗೀಕರಿಸಬೇಕೆಂದು ರಾಜ್ಯ ಸರಕಾರ ನೀಡಿರುವ ಆದೇಶಗಳನ್ನು ಅನುಷ್ಠಾನಗೊಳಿಸಲು ಒಂದು ವಾರದೊಳಗೆ ಪಾಲಿಕೆಯ ಪರಿಷತ್ ಸಭೆಯನ್ನು ಕರೆಯಬೇಕೆಂದು ಬೆಳಗಾವಿಯ ವಡಗಾವಿ ನೇಕಾರ ವೇದಿಕೆ ಪಾಲಿಕೆಯ ಆಯುಕ್ತರನ್ನು ಆಗ್ರಹಿಸಿದೆ.
ವೇದಿಕೆಯ ಪ್ರಮುಖ ಪದಾಧಿಕಾರಿಗಳು ಬುಧವಾರ ಪಾಲಿಕೆಯ ಉಪಯುಕ್ತ ಉದಯಕುಮಾರ ತಳವಾರ ಅವರಿಗೆ ಮನವಿ ಸಲ್ಲಿಸಿದ್ದು ರಾಜ್ಯ ಸರಕಾರದ ಆದೇಶದ ಅನುಷ್ಠಾನಕ್ಕಾಗಿ ಪಾಲಿಕೆಯ ಪರಿಷತ್ ಸಭೆ ಕರೆಯಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಸಭೆಯ ದಿನವನ್ನು ಗೊತ್ತು ಮಾಡಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಜೆಂಡಾದಲ್ಲಿ ಸೇರಿಸಬೇಕು. ಅಜೆಂಡಾವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹಿರಿಯ ನೇಕಾರ ಧುರೀಣ ಹಾಗೂ ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ಮಲ್ಲಪ್ಪ ಅಕ್ಷರದ ,ರಾಜು ಮ್ಯಾಗೋಟಿ,ದೇವಾಂಗ ಮಹಿಳಾ ಮಂಡಲದ ಅಧ್ಯಕ್ಷೆ ಮಂದಾಕಿನಿ ಕುಡಚಿ ಹಾಗೂ ಸುರೇಶ ಕುಡಚಿ ಮನವಿ ಸಲ್ಲಿಸಿದ ಪ್ರಮುಖರಾಗಿದ್ದಾರೆ.


,


















