ಮುಂಬೈ : ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ, ನಟ ರಣಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಹೊಸ ದಾಖಲೆ ಬರೆದಿದೆ.
ನವೆಂಬರ್ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿರುವ ಈ ಸಿನಿಮಾ, ಬಿಡುಗಡೆಗೆ ಇನ್ನು ಎರಡು ವಾರಗಳು ಬಾಕಿ ಇರುವಾಗಲೇ ಭಾರತದಲ್ಲಿ ಭಾರಿ ಗಳಿಕೆ ಕಾಣುತ್ತಿದೆ. ವರದಿಗಳ ಪ್ರಕಾರ, ‘ರಾಮಾಯಣ’ ಚಿತ್ರವು ಮುಂಗಡ ಬುಕಿಂಗ್ ಮೂಲಕವೇ ಈಗಾಗಲೇ ₹7.10 ಕೋಟಿ ಸಂಗ್ರಹಿಸಿದೆ.
ಸ್ಯಾಕ್ಷಿಲ್ಕ್ ವರದಿಯ ಪ್ರಕಾರ, ದೇಶದಾದ್ಯಂತ 3,707 ಪ್ರದರ್ಶನಗಳಿಗೆ ಈಗಾಗಲೇ 1.26 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಈ ಪೈಕಿ 8 ಪ್ರದರ್ಶನಗಳು ಈಗಾಗಲೇ ಸಂಪೂರ್ಣ ಭರ್ತಿಯಾಗಿವೆ. ಒಟ್ಟು ಮುಂಗಡ ಬುಕಿಂಗ್‌ನಲ್ಲಿ ಶೇ 92ರಷ್ಟು ಪಾಲು ಹಿಂದಿ ಆವೃತ್ತಿಗೆ ದೊರೆತಿದ್ದರೆ, ಕನ್ನಡ ಆವೃತ್ತಿಯ ಟಿಕೆಟ್‌ಗಳು ₹41 ಲಕ್ಷಕ್ಕೂ ಹೆಚ್ಚು ಮೌಲ್ಯಕ್ಕೆ
ಮಾರಾಟವಾಗಿವೆ. ಮಹಾರಾಷ್ಟ್ರವೊಂದರಲ್ಲೇ ಗರಿಷ್ಠ ಮಟ್ಟದ ಟಿಕೆಟ್‌ಗಳು ಮಾರಾಟವಾಗಿದ್ದು, ₹1.93 ಕೋಟಿ ಕಲೆಕ್ಷನ್ ಆಗಿದೆ.
ಈ ಪೌರಾಣಿಕ ಸಿನಿಮಾದ ತಾರಾಗಣದಲ್ಲಿ ರವಿ ದುಬೆ, ಸನ್ನಿ ಡಿಯೋಲ್, ಅರುಣ್ ಗೋವಿಲ್, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್ ಹಾಗೂ ಕುನಾಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಾಗತಿಕವಾಗಿ ಬಿಡುಗಡೆಯಾಗಲಿರುವ ಈ ಸಿನಿಮಾ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದ ಎರಡನೇ ಭಾಗವು 2027ರ ದೀಪಾವಳಿ ಹಬ್ಬದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.


,


















