| Latest Version 9.0.7 |

State News

ರೈತ ಹೋರಾಟಕ್ಕೆ ಶ್ರೀ ಅಡವಿಸಿದ್ದರಾಮ ಸ್ವಾಮೀಜಿಗಳ ಬೆಂಬಲ: 10 ಸಾವಿರ ರೊಟ್ಟಿ ವಿತರಣೆ

ಮೂಡಲಗಿ: ಸಮೀಪದ ಶಿವಾಪುರ ಗ್ರಾಮದ ಅಡವಿಸಿದ್ದೇಶ್ವರ ಮಠದ ಪೂಜ್ಯ ಶ್ರೀ ಅಡವಿಸಿದ್ದರಾಮ ಸ್ವಾಮೀಜಿಗಳ ನೇತೃತ್ವದಲ್ಲಿ ರೈತರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿ, ಹೋರಾಟಗಾರರಿಗೆ 10 ಸಾವಿರ ರೊಟ್ಟಿಗಳೊಂದಿಗೆ ಅಕ್ಕಿ ಹಾಗೂ ಅಡುಗೆ ಎಣ್ಣೆಯನ್ನು ವಿತರಿಸಲಾಯಿತು.

ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಅನ್ನದಾಸೋಹದ ಮೂಲಕ ಹೋರಾಟಗಾರರ ನೆರವಿಗೆ ಶ್ರೀಗಳು ಮುಂದಾಗಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಪಂಚಮಸಾಲಿ ಪೀಠದ ಪೂಜ್ಯ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರಾದ ಶಶಿಕಾಂತ ಗುರೂಜಿ, ಚೂನಪ್ಪ ಪೂಜೇರಿ, ಉಮೇಶ ಮುಧೋಳ, ಮಹಾಂತೇಶ ಕುಡಚಿ, ಅಡಿವೆಪ್ಪ ಗಿರೆಣ್ಣವರ ಸೇರಿದಂತೆ ಅನೇಕ ರೈತ ಹೋರಾಟಗಾರರು ಉಪಸ್ಥಿತರಿದ್ದರು.

Team Udayaprabha
";