| Latest Version 9.0.7 |

Local News

ದ. ಕ., ಕಾಸರಗೋಡು ಹವ್ಯಕ ಮಹಾಸಭಾ  ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ದ. ಕ. ಕಾಸರಗೋಡು ಹವ್ಯಕ ಮಹಾಸಭೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಜರುಗಿ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮೆದು ತಿರುಮಲೇಶ್ವರ ಭಟ್, ಉಪಾಧ್ಯಕ್ಷರಾಗಿ ಈಶ್ವರಭಟ್ ಕೆ. ಮತ್ತು ಡಾ. ವಸಂತಕುಮಾರ ಪೆರ್ಲ, ಕಾರ್ಯದರ್ಶಿಯಾಗಿ ಬೇತ ರಾಮಕೃಷ್ಣ ಭಟ್, ಖಜಾಂಚಿಯಾಗಿ ಗೀತಾದೇವಿ ಸಿ. ಆಯ್ಕೆಯಾದರು.

ಸದಸ್ಯರಾಗಿ ವಸಂತಿ ಎಸ್. ಭಟ್, ಪುಷ್ಪಾ ಕೆ. ಖಂಡಿಗೆ, ಪ್ರವೀಣಶಂಕರ ಕೆ., ಬಾಲಸುಬ್ರಹ್ಮಣ್ಯ ಕಬೆಕ್ಕೋಡು, ರಾಜೇಂದ್ರಪ್ರಸಾದ್ ಬಲ್ಲರಮಜಲು, ಕಾನತ್ತಿಲ ಶಾಮಭಟ್, ಕಾಕುಂಜೆ ರಾಜಶೇಖರ ಭಟ್, ಶಿವಪ್ರಸಾದ್ ಬಿ. (ಹವ್ಯಕವಾರ್ತೆ ಪತ್ರಿಕೆಯ ಜವಾಬ್ದಾರಿ), ದಿವಾಣ ಗೋವಿಂದಭಟ್ (ಮಂಗಳೂರು ಹವ್ಯಕಸಭಾ ಪ್ರತಿನಿಧಿ) ಮತ್ತು ವಿಜಯಲಕ್ಷ್ಮಿ ಉಳುವಾನ (ಭಾರತಿ ಹಾಸ್ಟೆಲ್ ಸಂಯೋಜನೆಯ ಜವಾಬ್ದಾರಿ) ಆಯ್ಕೆಯಾದರು.

Team Udayaprabha
";