| Latest Version 9.0.7 |

Local News

ಯಲ್ಲಮ್ಮ ದೇವಸ್ಥಾನದಲ್ಲಿ ₹2.69 ಕೋಟಿ ಕಾಣಿಕೆ ಸಂಗ್ರಹ

ಸವದತ್ತಿ : ಯಲ್ಲಮ್ಮನಗುಡ್ಡದಲ್ಲಿ ನಾಲ್ಕು ದಿನ ನಡೆದ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿಗಳ ಎಣಿಕೆ ಕಾರ್ಯ ಬುಧವಾರ ಮುಕ್ತಾಯಗೊಂಡಿದ್ದು, ₹2.69 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.

ಇದರಲ್ಲಿ ₹2.34 ಕೋಟಿ ನಗದು, ₹ 26.95 ಲಕ್ಷ ಮೌಲ್ಯದ ಮೌಲ್ಯದ ಚಿನ್ನಾಭರಣ, ₹7.32 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸೇರಿವೆ.

‘ಮೇ 7ರಿಂದ ಅ. 10ರ ಅವಧಿಯಲ್ಲಿ ಭಕ್ತರು ಹುಂಡಿಯಲ್ಲಿ ಹಾಕಿದ್ದ ಕಾಣಿಕೆ ಎಣಿಸಲಾಗುತ್ತಿದೆ. ಕಾಣಿಕೆ ಇರಿಸಿದ್ದ 139 ಚೀಲಗಳ ಪೈಕಿ 54 ಚೀಲಗಳಲ್ಲಿನ ಕಾಣಿಕೆ ಎಣಿಕೆ ಮಾಡಲಾಗಿದೆ. ಇನ್ನೂ 85 ಚೀಲಗಳ ಎಣಿಕೆ ಬಾಕಿ ಇದೆ’ ಎಂದು ಯಲ್ಲಮ್ಮ ದೇವಸ್ಥಾನದ ಅಧಿಕಾರಿಗಳು ತಿಳಿಸಿದರು.

ಯಲ್ಲಮ್ಮ ದೇವಸ್ಥಾನದ ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು, ತಹಶೀಲ್ದಾರ್ ಕಚೇರಿ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಹಾಗೂ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಾಜಶ್ರೀ ಜೈನಾಪುರ, ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಅಲ್ಲಮಪ್ರಭು ಪ್ರಭುನವರ, ಶೀತಲ ಕಡಟ್ಟಿ, ಸಿ.ಎನ್. ಕುಲಕರ್ಣಿ, ಐ.ಸಿ. ಕಗದಾಳ, ಪ್ರಭು ಹಂಜಗಿ, ಸಂಗಮೇಶ ಪಂಪನವರ, ಮಹಾಂತೇಶ ಗುಡಗನಟ್ಟಿ, ಎಎಸ್‌ಆಯ್ ನಿಂಗಯ್ಯ ಧಾರವಾಡ, ಸೋಮಶೇಖರ ನಾಯ್ಕರ್, ಮಂಜುನಾಥ ಆಡಕರ, ಮಹೇಶ ಸಿಂಗಾಪಂಗಾ ಮತ್ತಿತರರು ಉಪಸ್ಥಿತರಿದ್ದರು.

Team Udayaprabha
";