ಬೆಳಗಾವಿ: ಮಹಿಳೆಯರು ಗ್ಯಾರಂಟಿಗೆ ಮರಳಾಗಬೇಡಿ, ಚುನಾವಣೆ ಮುಗಿದ ಬಳಿಕ ಗ್ಯಾರಂಟಿಗಳು ಬಂದ್ ಆಗಲಿದೆ.‌ ಆದರೆ ಮೋದಿಯವರು ಶಾಸ್ವಾತ ಗ್ಯಾರಂಟಿ ನೀಡುತ್ತಾರೆ. ಕಳೆದ ಬಾರಿ ಲೋಕಸಭಾ ಚುನಾವಣೆ ವೇಳೆ ಗೋಕಾಕ ಕ್ಷೇತ್ರದಿಂದ 50 ಸಾವಿರ ಲೀಡ್ ನೀಡಿದ್ದೇವೆ. ಈ ಬಾರಿ ಜಗದೀಶ್ ಶೆಟ್ಟರ್ ಅವರಿಗೆ 1 ಲಕ್ಷ ಲೀಡ್ ನೀಡುತ್ತೇವೆ.‌ ಜಗದೀಶ್ ಶೆಟ್ಟರ್ ಅವರು ಗೆದ್ದ ಮೇಲೆ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.‌

ಚುನುವಣಾ ಪ್ರಚಾರ್ಥವಾಗಿ ಗೋಕಾಕ ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಸಮಾವೇಶ ಆಯೋಜನೆ ಮಡಾಲಗಿತ್ತು, ಈ ವೇಳೆ ಅಂಕಲಗಿ ಗ್ರಾಮದಲ್ಲಿ ಬೃಹತ್ ರೋಡ್ ಶೋ ನಡೆಸಲಾಯಿತು. ಈ ವೇಳೆ ಸಾವಿರಾರು ಕಾರ್ಯಕರ್ತರು ಭಾಗಿ ಆಗಿದ್ದರು, ಬಳಿಕ ಸಮಾವೇಶದಲ್ಲಿ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಈ ಚುನಾವಣೆ ಭಾರತದ ಚುನಾವಣೆ, ಲೋಕಸಭಾ ಚುನಾವಣೆ ದೇಶದ ಭದ್ರತೆ, ಆರ್ಥಿಕತೆ ಮೇಲೆ ಚುನಾವಣೆ ನಡೆಯುತ್ತದೆ‌. ಕಳೆದ ಬಾರಿ ದೇಶದಲ್ಲಿ ಕಾಂಗ್ರೆಸ್ ಕೇವಲ 40-45 ಸೀಟ್ ಅಷ್ಟೆ ಗೆದ್ದಿದ್ದೆ. ಈ ಬಾರಿಯು ಕಾಂಗ್ರೆಸ್ 50 ಸಿಟು ಗೆದ್ದರೆ ಅದೆ ಹೆಚ್ಚು. ಮೋದಿಯವರು ಭಾರತದ ನಾಯಕ ಅಷ್ಟೆ ಅಲ್ಲದೆ ಜಗತ್ತಿನ ನಾಯಕ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸಮಯದಲ್ಲಿ ಇದ್ದ ಕಾಂಗ್ರೆಸ್ ಈಗ ಉಳಿದಿಲ್ಲ. ಈಗಿನ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯನೂ ಇಲ್ಲ ನಾಯಕನೂ ಇಲ್ಲ. ಹಾಗಾಗಿ ಜಗದೀಶ್ ಶೆಟ್ಟರ್ ಅವರಿಗೆ ಎಲ್ಲರೂ ಮತ ನೀಡಬೇಕು.‌ ಜಗದೀಶ ಶೆಟ್ಟರ್ ಗೆದ್ದರೆ ಕೇಂದ್ರ ಮಂತ್ರಿ ಆಗುತ್ತಾರೆ ಎಂದು ರಮೇಶ್ ಜಾರಕಿಹೊಳಿ ಅವರು ತಿಳಿಸಿದರು.‌

ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಈ ಚುನಾವಣೆ ಬಹಳ ತುರಸಿನ ಚುನಾವಣೆ ಆಗಿದೆ. ಮೋದಿ ಅಭಿಮಾನಿಗಳು ಬೆಳಗಾವಿಯಲ್ಲಿ ಈ ಭಾಗದಿಂದ ಬಂದು ರವಿವಾರ ನಡೆದ ಕಾರ್ಯಕ್ರಮ ಯಶಸ್ವಿ ಮಾಡಿದ್ದೀರಿ. ಬೆಳಗಾವಿಯಲ್ಲಿ ಮೋದಿ ಕಾರ್ಯಕ್ರಮ ಆದ ಮೇಲೆ ಕಾಂಗ್ರೆಸ್ ಗೆ ನಡುಕ ಶುರು ಆಗಿದೆ. ದೇಶದ ಸಂರಕ್ಷಣೆ, ದೇಶವನ್ನು ಬಲ ಪಡಿಸಲು ಮೋದಿ ನಾಯಕತ್ವ ಬೇಕು. ಮೋದಿಯವರು 10 ವರ್ಷದ ಆಡಳಿತದಲ್ಲಿ ಭ್ರಷ್ಟಾಚಾರ ಇಲ್ಲದೆ ಆಡಳಿತ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ಮೋದಿಯವರನ್ನು ಟಿಕಿಸುತ್ತಾರೆ ಎಂದು ತಿಳಿಸಿದರು.

ಮೋದಿಯವರ ಅವಧಿಯಲ್ಲಿ ಪ್ರತಿ ಸಮುದಾದ ಪ್ರಗತಿ ಆಗಿದೆ. 14 ನೇ ಸ್ಥಾನದಲ್ಲಿ ಇದ್ದ ದೇಶದ ಆರ್ಥಿಕತೆ 5ನೇ ಸ್ಥಾನಕ್ಕೆ ಬಂದಿದೆ. ಇನ್ನೂ ಕೆಲವೇ ವರ್ಷದಲ್ಲಿ ದೇಶದ ಆರ್ಥಿಕತೆ ಲೊದಲ ಸ್ಥಾನಕ್ಕೆ ಬರಲಿದೆ. ಅಮೇರಿಕಾ, ರಷ್ಯಾ, ಇಂಗ್ಲೆಂಡ್ ಅಂತಹ ದೇಶಗಳು ಮೋದಿಯವರ ಸಲಹೆಗಳು ತೆಗೆದುಕೊಳ್ಳುತ್ತಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯಸ್ಥೆ ಹಾಳಾಗಿದೆ. ಗದಗನಲ್ಲಿ ನಾಲ್ಕು ಜನರ ಹತ್ಯೆ ಆಯ್ತು, ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಆಗಿದೆ. ನೇಹ ಹತ್ಯೆ ಆಗಿದೆ.‌ ಆದರೂ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.‌

ದಿ. ಸುರೇಶ್ ಅಂಗಡಿಯವರ ಸಮಯದಲ್ಲಿ ಸಾಕಷ್ಟು ದೇವಸ್ಥಾನಗಳ ಅಭಿವೃದ್ಧಿಗೆ ಹಣ ನೀಡಿದ್ದಾರೆ. ಬೆಳಗಾವಿ ಸ್ಮಾರ್ಟಿ ಸಿಟಿ, ಸಾಕಷ್ಟು ರೈಲ್ವೆಗಳ ಅಭಿವೃದ್ಧಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು.‌ ಹಾಗಾಗಿ ನನಗೆ ಅವಕಾಶ ನೀಡಬೇಕು.‌ ಬೆಳಗಾವಿ ಜೊತೆ ನನಗೆ 30 ವರ್ಷದ ನಂಟು ಇದೆ. ರೈತರ ಸಮಸ್ಯೆಗಳು ನನಗೆ ಗೊತ್ತಿದೆ.‌ ನಾನು ಸ್ಪೀಕರ್ ಇದ್ದಾಗ ಸುವರ್ಣಸೌದದ ಕಾಮಗಾರಿಗೆ ಚಾಲನೆ ನೀಡಿದೆ. ಬಳಿಕ ಸಿಎಂ ಇದ್ದಾಗ ಸುವರ್ಣಸೌಧ ಉದ್ಘಾನೆ ಮಾಡಿದ್ದೇನೆ ಎಂದು ತಿಳಿಸಿದರು.‌

ನಾನು 6 ಸಲ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಅದೇ ರೀತಿ ಲೋಕಸಭೆಗೆ ಆಯ್ಕೆ ಆಗಿ ಹೊಸ ಮೇಲೆ ಜಿಲ್ಲೆಯ ಸಾಕಷ್ಟು ಆಭಿವೃದ್ಧಿ ಮಾಡುತ್ತೇನೆ.‌ ರಮೇಶ ಜಾರಕಿಹೊಳಿ ಜೊತೆ ಸೇರಿ ಗೋಕಾಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಬೇಕು‌ ಎಂದು ತಿಳಿಸಿದರು.‌

ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಈ ಚುನಾವಣೆ ಒಂದು ಐತಿಹಾಸಿಕ ಚುನಾವಣೆ ಆಗಿದೆ. ಆರು ಸಲ ಶಾಸಕರಾಗಿ, ಸಿಎಂ ಆಗಿ, ಸಚಿವರಾಗಿ ವಿಧಾನ ಸಭೆ ಸ್ಪೀಕರ್ ಆಗಿ ಅನುಭವ ಇರುವ ವ್ಯಕ್ತಿ ಜಗದೀಶ್ ಶೆಟ್ಟರ್ ಅವರು ಒಂದು ಕಡೆ ಆದರೆ, ಕಾಂಗ್ರೆಸ್ ಅಭ್ಯರ್ಥಿಗೆ ಅನುಭ ಎನೂ.? ಮೋದಿಯವರು
ಕೋವಿಡ್ ಅನ್ನೊ ಮಹಾಮಾರಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ ಈ ಹಿಂದೆ ಕಾಲರಾ ಬಂದಾಗ ಕೋಟ್ಯಾಂತರ ಜನ ಸಾವನ್ನಪ್ಪಿದ್ದಾರೆ.
ರಮೇಶ ಜಾರಕಿಹೊಳಿ ಅವರು ನಿರಾವರಿ ಸಚಿವರಾಗಿದ್ದಾಗ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಹಾಗಾಗಿ ರಮೇಶ ಜಾರಕಿಹೊಳಿ ನಾಯಕತ್ವದಲ್ಲಿ ಜಗದೀಶ್ ಶೆಟ್ಟರ್ ಅವರು ಗೆಲ್ಲಬೇಕು ಎಂದರು.‌

*ಬಿಜೆಪಿ ಸೇರಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು*

ಬಿಜೆಪಿ ತತ್ವಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕ್ವ ಒಪ್ಪಿಕೊಂಡು ಕಾಂಗ್ರೆಸ್ ತೊರೆದು ನೂರಾರು ಯುವಕರು ಬಿಜೆಪಿ ಪಕ್ಷ ಸೇರಿಕೊಂಡರು.‌ ಪಕ್ಷ ಸೇರಿದ ಯುವಕರು ಶಾಸಕ ರಮೇಶ ಜಾರಕಿಹೊಳಿ ಹಾಗೂ ಜಗದೀಶ ಶೆಟ್ಟರ್ ಗೆ ಸನ್ಮಾನ ಮಾಡಿದರು.‌

ಮಾಜಿ ಶಾಸಕ ಎಂ. ಎಲ್. ಮತ್ತೆಣ್ಣವರ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶುಭಾಸ ಪಾಟೀಲ್, ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಾಪ್ಪಗೋಳ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು