ಬೆಳಗಾವಿ: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ, ಸಹೋದರಿ ನೇಹಾ ಹಿರೇಮಠ ಅವರ ಕೊಲೆ ಘಟನೆ ಅತ್ಯಂತ ದುರ್ದೈವದ ಸಂಗತಿ, ಅತ್ಯಂತ ಖಟು ಶಬ್ದಗಳಿಂದ ನಾನು ಖಂಡಿಸುತ್ತೇನೆ. ಕೃತ್ಯ ಎಸಗಿದ ವ್ಯಕ್ತಿಗ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ನೇಹಾ ಹಿರೇಮಠ ಕುಟುಂಬದ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ನನ್ನ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಅವರು ನಿನ್ನೆ ಅವರ ಮನೆಗೆ ಹೋಗಿ ಸಾಂತ್ವನ ಹೇಳಿ ಬಂದಿದ್ದಾರೆ, ಧೈರ್ಯ ಹೇಳಿ ಬಂದಿದ್ದಾರೆ. ಇಂತಹ ಘಟನೆ ಎಲ್ಲೂ ನಡೆಯಬಾರದು. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು, ಮುಂದೆ ಇಂತಹ ಕೃತ್ಯಕ್ಕೆ ಯಾರೂ ಕೈಹಾಕಬಾರದು ಅಂತಹ ಶಿಕ್ಷೆ ಆತನಿಗೆ ಆಗಬೇಕು ಎಂದು ಮೃಣಾಲ ಹೇಳಿದ್ದಾರೆ.

ನಾವೆಲ್ಲ ನೊಂದ ಕುಟುಂಬದ ಜೊತೆಗಿದ್ದೇವೆ. ಆದರೆ ಯಾರೂ ಈ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದೆಂದು ವಿನಂತಿಸುತ್ತೇನೆ ಎಂದು ಮೃಣಾಲ್‌ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.