ಹೆಬ್ರಿ: ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ಬುಧವಾರ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮವು ಭಗವದ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪ್ರಣಾಮ ಮಾಡುವುದರೊಂದಿಗೆ ಆರಂಭವಾಯಿತು. ವೇದಿಕೆಯಲ್ಲಿ ಮಾತಾಜಿ ಮತ್ತು ಗುರೂಜಿಯವರನ್ನು ಆಸೀನರನ್ನಾಗಿಸಿ ಆರತಿ ಬೆಳಗಿಸಲಾಯಿತು. ಬಳಿಕ ಶಾಲಾ ವಿದ್ಯಾರ್ಥಿಗಳು ಗುರುಗಳಿಗೆ ನಮನ ಸಲ್ಲಿಸಿದರು.
ಸ್ತುತಿ ಅವರು ಗುರುಪೂರ್ಣಿಮೆಯ ಮಹತ್ವದ ಕುರಿತು ಅರ್ಥಗರ್ಭಿತವಾಗಿ ಮಾತನಾಡಿದರು. ಸುಧೀಕ್ಷಾ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಭಕ್ತಿಗೀತೆ ಹಾಗೂ ಕಿರುನಾಟಕವನ್ನು ಪ್ರಸ್ತುತಪಡಿಸಿ ಸಭಿಕರ ಮನರಂಜಿಸಿದರು.
Udaya Prabha > State News > ಗುರುಗಳಿಗೆ ನಮನ ಸಲ್ಲಿಸಿದ ಅಮೃತ ಭಾರತಿ ವಿದ್ಯಾರ್ಥಿಗಳು
ಗುರುಗಳಿಗೆ ನಮನ ಸಲ್ಲಿಸಿದ ಅಮೃತ ಭಾರತಿ ವಿದ್ಯಾರ್ಥಿಗಳು
Team Udayaprabha29/07/2026
posted on

the authorTeam Udayaprabha
All posts byTeam Udayaprabha
Leave a reply


,
,

















