| Latest Version 9.0.7 |

National News

ರೈಲಿನ ಸಾಮಾನ್ಯ ಸ್ಟೀಪರ್ ಕೋಚಲ್ಲೂ ದಿಂಬು, ಹೊದಿಕೆ

 

50 ₹ಶುಲ್ಕ ನೀಡಿದರೆ ದಿಂಬು, ಹೊದಿಕೆ ವಿತರಣೆ ದಕ್ಷಿಣ ರೈಲ್ವೆಯಿಂದ ಜ.1ರಿಂದ ಹೊಸ ಪ್ರಯೋಗ

ನವದೆಹಲಿ: ಈವರೆಗೆ ಎಸಿ ಕೋಚ್ ಪ್ರಯಾಣಿ ಕರಿಗೆ ಮಾತ್ರ ರೈಲ್ವೆ ಇಲಾಖೆ ಹಾಸಿಗೆ-ದಿಂಬು-ಹೊದಿಕೆ ನೀಡುತ್ತಿತ್ತು. ಇದೀಗ ನಾನ್ ಎಸಿ ಸ್ಲಿಪರ್ ಕೋಚ್ ಪ್ರಯಾಣಿಕರು ಕೂಡ ಈ ಸೌಲಭ್ಯ ಪಡೆಯಬಹುದು. ಜ.1ರಿಂದ ನಾನ್ ಎಸಿ ಸ್ತ್ರೀಪರ್ ಕೋಚ್ ಪ್ರಯಾಣಿಕರಿಗೆ ನಿಗದಿತ 50 ರು. ಬಾಡಿಗೆ ಆಧಾರದಲ್ಲಿ ತಲೆದಿಂಬು ಹಾಗೂ ಬೆಡ್‌ಶೀಟ್ ವಿತರಿಸಲು ದಕ್ಷಿಣ ರೈಲ್ವೆ ನಿರ್ಧರಿಸಿದೆ.

ಚೆನ್ನೈ-ಮಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಚೆನ್ನೈಎಸ್ಟೋರ್-ಮಂಗಳೂರು ಎಕ್ಸ್‌ಪ್ರೆಸ್ ಸೇರಿ 10 ರೈಲುಗಳಲ್ಲಿ ಈ ಯೋಜನೆ ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಇದರ ಯಶಸು ನೋಡಿ ಕೊಂಡು ಉಳಿದ ರೈಲುಗಳಿಗೂ ಇದನ್ನು ವಿಸ್ತರಿ ಸಲು ಉದ್ದೇಶಿಸಲಾಗಿದೆ.

ದಕ್ಷಿಣ ರೈಲ್ವೆಯ ಈ ಪ್ರಯತ್ನದಿಂದಾಗಿ ಮಳೆಗಾಲ ಹಾಗೂ ಚಳಿಗಾಲದ ಅವಧಿಯಲ್ಲಿ ನಾನ್ ಎಸಿ ಸ್ವೀಪರ್ ಕೋಚ್ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

ಬೆಡ್‌ ಶೀಟ್‌ಗೆ 50 ರು. ಬಾಡಿಗೆ ಪಡೆದರೆ, ಕೇವಲ ಬೆಡ್‌ಶೀಟ್‌ಗೆ 20 ರು. ಹಾಗೂ ಕವ‌ರ್ ಸಹಿತ ತಲೆದಿಂಬು ಬೇಕಿದ್ದರೆ 30 ರು. ವಸೂಲಿ ಮಾಡಲಾಗುತ್ತದೆ.

Team Udayaprabha
";