ಬೆಳಗಾವಿ : ಕೆ ಎಲ್ ಇ ಸಂಸ್ಥೆಯ, ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭವನ್ನು ಗುರುವಾರ ಮೇ 21 ರಂದು ಬೆಳಿಗ್ಗೆ 10:30 .ಕ್ಕೆ ಕೆ ಎಲ್ ಇ ಸಂಸ್ಥೆಯ ಜೆ ಎನ್ ಎಂ ಸಿ ಆವರಣದಲ್ಲಿ ಡಾ ಸಿ ಎಸ್ ಜೀರಿಗೆ ಸಭಾಂಗಣದ ಕೆ ಎಲ್ ಇ ಸೆಂಟನರಿ ಕನ್ವೆನಶನ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ. ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಎಸ್ .ಆರ್. ನಿರಂಜನ್ ಆಗಮಿಸಲಿದ್ದಾರೆ.
ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ ಎಂ ತ್ಯಾಗರಾಜ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕೆ ಎಲ್ ಇ ಕಾಲೇಜು ಶಿಕ್ಷಣ ಸಂಸ್ಥೆಗಳ ಕಾರ್ಯಕಾರಿಣಿ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಎಂ ಕವಟಗಿಮಠ ವಹಿಸಿಕೊಳ್ಳಲಿದ್ದಾರೆಂದು ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಜ್ಯೋತಿ ಎಸ್ ಕವಳೇಕರ ಹಾಗೂ ಕಾಲೇಜಿನ ಪರೀಕ್ಷೆ ನಿಯಂತ್ರಕಿ ಡಾ. ವಿಜಯಲಕ್ಷ್ಮಿ ಪಾಟೀಲ ತಿಳಿಸಿದ್ದಾರೆ.


,
,

















