| Latest Version 9.0.7 |

National News

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ: 2 ವಾರದೊಳಗೆ ಸರಿಸುಮಾರು ₹7.5 ಹೆಚ್ಚಳ..!

 

 

ನವದೆಹಲಿ: ಪೆಟ್ರೋಲ್‌ ದರವನ್ನು ಲೀಟರ್‌ಗೆ ₹2.61

ಹಾಗೂ ಡೀಸೆಲ್ ದರವನ್ನು ₹2.71 ಏರಿಕೆ ಮಾಡಲಾಗಿದೆ. ಆ ಮೂಲಕ ಎರಡು ವಾರದೊಳಗೆ ನಾಲ್ಕನೇ ಸಲ ಬೆಲೆ ಏರಿಕೆಯಾಗಿದೆ.

 

ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನಗಳ ಮಾರಾಟ ಕಂಪನಿಗಳು ಮೇ 15ರಿಂದ ಇಂಧನ ಬೆಲೆಯನ್ನು ಹೆಚ್ಚಿಸುತ್ತಿವೆ. ಇದಕ್ಕೂ ಮೊದಲು ಸರಿಸುಮಾರು ನಾಲ್ಕು ವರ್ಷ ಇಂಧನ ಬೆಲೆ ಏರಿಕೆಯಾಗಿರಲಿಲ್ಲ.

 

ಇದೀಗ ಮೇ 15ರಿಂದ ಇಂಧನ ಬೆಲೆ ಏರಿಕೆಯ ನಂತರ ಎರಡು ವಾರದೊಳಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಸರಿಸುಮಾರು ₹7.5ರಷ್ಟು ಜಾಸ್ತಿ ಆದಂತಾಗಿದೆ.

 

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹99.51ರಿಂದ ₹102.12ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ ₹92.49ರಿಂದ ₹95.20ಕ್ಕೆ ಹೆಚ್ಚಳವಾಗಿದೆ.

Team Udayaprabha
";