ರಾಯಗಢ, ಮಹಾರಾಷ್ಟ್ರ: ಎಸ್‌ಯುವಿ ಕಾರೊಂದು
ಸುಮಾರು 1 ಸಾವಿರ ಅಡಿ ಆಳದ ಕಣಿವೆಗೆ ಬಿದ್ದು 8 ಯುವಕರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.
ಮೃತರು ಮಹಾರಾಷ್ಟ್ರದ ಸತಾರ ಹಾಗೂ ರತ್ನಗಿರಿ ನಗರದವರು ಎಂದು ತಿಳಿದು ಬಂದಿದೆ.
ಪೋಳಾದಪುರ್-ಮಹಾಬಲೇಶ್ವರ ರಸ್ತೆಯ ಅಂಬೇನಾಳಿ ಘಾಟ್ ಬಳಿ ಈ ದುರಂತ ಭಾನುವಾರ ಬೆಳಗಿನ ಜಾವ ಸಂಭವಿಸಿದೆ ಎಂದು ರಾಯಗಢ ಎಸ್‌ಪಿ ತಿಳಿಸಿದ್ದಾರೆ.
ಅಂಬೇನಾಳಿ ಘಾಟ್ ಬಳಿ ಕಡಿದಾದ ರಸ್ತೆಯ ತಿರುವಿನಲ್ಲಿ ಕಾರು ಹೋಗುತ್ತಿರುವಾಗ ಆಳವಾದ ಕಣಿವೆಗೆ ನಿಯಂತ್ರಣ ತಪ್ಪಿ ಬಿದ್ದಿದೆ. ಆ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಹ ಸಿಗದಿದ್ದರಿಂದ ತುರ್ತು ಸಹಾಯ ಸಾಧ್ಯವಾಗಿರಲಿಲ್ಲ. ಇದರಿಂದ ಮೃತರ ಕುಟುಂಬದವರು ಆತಂಕಗೊಂಡು ತಮ್ಮವರು ಸಂಪರ್ಕಕಕ್ಕೆ ಸಿಗುತ್ತಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದು ಪೊಲೀಸರು ಕಾರ್ಯಾಚರಣೆ ಕೈಗೊಂಡಾಗ ಭೀಕರ ಅಪಘಾತ ಸಂಭವಿಸಿರುವುದು ಕಂಡು ಬಂದಿದೆ.


,
,


















