| Latest Version 9.0.7 |

National News

ಜಪಾನ್ ಪ್ರಧಾನಿಯನ್ನು ‘ತಂಗಿ’ ಎಂದು ಸಂಬೋಧಿಸಿದ ಪ್ರಧಾನಿ ನರೇಂದ್ರ ಮೋದಿ

 

 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ

ಅವರು ಗುರುವಾರ ಇಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಷಣ ಮಾಡುತ್ತಾ, ಜಪಾನ್‌ನ ಪ್ರಧಾನಿ ಸನೇ ತಕೈಚಿ ಅವರನ್ನು ತಮ್ಮ ‘ತಂಗಿ’ ಎಂದು ಸಂಬೋಧಿಸಿ, ಅವರನ್ನು ‘ದೂರದೃಷ್ಟಿಯ ಮತ್ತು ಜನಪ್ರಿಯ ನಾಯಕಿ’ ಎಂದು ಹೊಗಳಿದರು.

 

ಪ್ರಧಾನಿ ಮೋದಿ ಹಿಂದಿಯಲ್ಲಿ ಭಾಷಣ ಮಾಡುತ್ತಾ ಹೇಳಿಕೆ ನೀಡಿದ್ದಾರೆ. ತಾಂತ್ರಿಕ ಸಾಧನದ ಮೂಲಕ ಅದರ ಜಪಾನಿ ಅನುವಾದ ಕೇಳುತ್ತಿದ್ದ ತಕೈಚಿ ಅವರು ಅದಕ್ಕೆ ನಗುವಿನೊಂದಿಗೆ ಪ್ರತಿಕ್ರಿಯಿಸಿದರು.

 

ನಂತರ ಜಪಾನಿ ಭಾಷೆಯಲ್ಲಿ ಮಾತನಾಡಿದ ತಕೈಚಿ ಅವರು, ಮೋದಿ ಅವರ ತಂಗಿ ಸಂಬೋಧನೆಯನ್ನು ಒಪ್ಪಿಕೊಳ್ಳುತ್ತಾ, ‘…ನಾವು ಈ ಸಂಬಂಧವನ್ನು ‘ಅಣ್ಣ-ತಂಗಿ’ ತರಹ ಬೆಳೆಸಲು ಒಪ್ಪಿಕೊಂಡಿದ್ದೇವೆ’ ಎಂದು ತಿಳಿಸಿದರು.

 

ಭಾರತ ಮತ್ತು ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಂದಿದ್ದು, ಉಭಯ ದೇಶಗಳ ನಡುವಿನ ಸ್ನೇಹಕ್ಕೆ ಸುದೀರ್ಘ ಇತಿಹಾಸವಿದೆ.

 

ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಆರ್ಥಿಕ ಭದ್ರತೆಗೆ ಜಂಟಿ ಯೋಜನೆ ರೂಪಿಸಿವೆ ಎಂದು ಮೋದಿ ಅವರು ತಿಳಿಸಿದರು.

Team Udayaprabha
";