| Latest Version 9.0.7 |

State News

ಬಿಲ್ಲವ ಅಸೋಸಿಯೇಶನ್ ಸಮಾಜಕ್ಕೆ ಹೆಮ್ಮೆ: ಪದ್ಮರಾಜ್

ಬೆಂಗಳೂರು: ಬೆಂಗಳೂರು ಬಿಲ್ಲವ ಅಸೋಸಿಯೇಶನ್ ನಾರಾಯಣಗುರುಗಳ ಚಿಂತನೆಯಡಿ ಆಯೋಜಿಸಿಕೊಂಡು ಬರುತ್ತಿರುವ ಕಾರ್ಯಚಟುವಟಿಕೆಗಳು ಶ್ಲಾಘನೀಯವಾಗಿದ್ದು, ನಿಜಕ್ಕೂ ಇದು ಸಮಾಜಕ್ಕೆ ಹೆಮ್ಮೆಯ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಹೇಳಿದರು.

ಬೆಂಗಳೂರು ಬಿಲ್ಲವ ಅಸೋಸಿಯೇಶನ್ ವತಿಯಿಂದ ಹುಳಿಮಾವುನಲ್ಲಿರುವ ಅಸೋಸಿಯೇಶನ್‌ನ ಬಿಲ್ಲವ ಭವನದಲ್ಲಿ ಭಾನುವಾರ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಟಿ ತಿಂಗಳ ವಿಶೇಷತೆ ಬಗ್ಗೆ ತುಳು ಜಾನಪದ ವಿದ್ವಾಂಸ ಡಾ. ಅರುಣ್ ಉಳ್ಳಾಲ್ ಉಪನ್ಯಾಸ ನೀಡಿ, ಆಟಿ ತಿಂಗಳು ಜೀವನದಲ್ಲಿ ಬಡತನದೊಂದಿಗೆ ಜೀವನ ಬದುಕನ್ನು ಕಲಿಸಿದ ತಿಂಗಳು. ನಮ್ಮ ಹಿರಿಯರು ಬಡತನ, ಸಂಕಷ್ಟ ಜೀವನದಲ್ಲೇ ಬದುಕು ಸಾಗಿಸಿ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ರೂಪಿಸಿದರು ಎಂಬ ಸತ್ಯವನ್ನು ನಾವು ಅರಿತುಕೊಳ್ಳಬೇಕಿದೆ. ನಾವು ನಮ್ಮ ಮುಂದಿನ ಜನಾಂಗಕ್ಕೆ ಆಟಿ ತಿಂಗಳ ವಿಶಿಷ್ಟತೆ, ಆಹಾರ ಪದ್ಧತಿಯನ್ನು ಪರಿಚಯಿಸುವಲ್ಲಿ ಆಟಿಡೊಂಜಿ ದಿನ ಅರ್ಥಪೂರ್ಣ ಕಾರ್ಯಕ್ರಮ ಎಂದರು.
ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಎಂ. ವೇದಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವರ ಆಶೀರ್ವಾದ ಹಾಗೂ ನಾರಾಯಣಗುರುಗಳ ಪ್ರೇರಣೆಯಿಂದ ಅಸೋಸಿಯೇಶನ್ ಈವರೆಗೆ ಯೋಜಿಸಿದಂತಹ ಎಲ್ಲ ಯೋಜನೆಗಳು ನಿರೀಕ್ಷೆಯಂತೆ ಕೈಗೂಡಿದೆ. ಮುಂದಿನ ದಿನಗಳಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಮ್ಮ ಬಹು ನಿರೀಕ್ಷೆಯ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಯೋಜನೆಯಿದೆ. ಅದರ ನಿವೇಶನ ಕಾರ್ಯ ಅಂತಿಮ ಹಂತದಲ್ಲಿದ್ದು, ಅದು ಪೂರ್ಣಗೊಂಡ ಬಳಿಕ ಸುಮಾರು 10 ಸಾವಿರಕ್ಕೂ ಅಧಿಕ ಬಿಲ್ಲವ ಬಂಧುಗಳನ್ನು ಸೇರಿಸಿ ಶಿಲಾನ್ಯಾಸ ಕಾರ್ಯಕ್ರಮ ಆಯೋಜಿಸಲಾಗುವುದು. ಇದು ಮಾತ್ರವಲ್ಲದೆ ನಮ್ಮ ಸಮಾಜದ ಹಿರಿಯ ನಾಗರಿಕರಿಗೆ ವೃದ್ಧಾಶ್ರಮ, ದೇವಿ ಬೈದೆದಿ ಹೆಸರಿನಲ್ಲಿ ಆಯುರ್ವೇದ ಸೆಂಟರ್ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ದೇವತಾನುಗ್ರಹ, ಗುರು-ಹಿರಿಯರ ಆಶೀರ್ವಾದದಿಂದ ಆ ಕನಸುಗಳು ಸಾಕಾರಗೊಳ್ಳುವ ವಿಶ್ವಾಸವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ವಿಜಯ್ ಕೋಟ್ಯಾನ್ ಮಾತನಾಡಿ, ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಕಾರ್ಯಯೋಜನೆಗಳು ಇಡೀ ಸಮಾಜಕ್ಕೆ ಕೈಗನ್ನಡಿಯಂತಿದೆ. ಬಿಲ್ಲವ ಸಂಘದ ಕಾರ್ಯವೈಖರಿ ಬಗ್ಗೆ ಅಧ್ಯಯನಕ್ಕೆ ಯೋಗ್ಯವಾದ ಸಂಘವಾಗಿ ಅಸೋಸಿಯೇಶನ್ ರೂಪುಗೊಂಡಿದೆ. ನಾರಾಯಣಗುರುಗಳ ಆರಾಧನೆಯೊಂದಿಗೆ ಅವರ ಚಿಂತನೆ, ತತ್ವಾದರ್ಶವನ್ನು ಅಕ್ಷರಶಃ ಪಾಲಿಸಿದ ಅಪರೂಪದ, ಮಾದರಿ ಸಂಘಟನೆಯಾಗಿದೆ. ಸಂಘದ ಭವಿಷ್ಯದ ಯೋಜನೆ, ಕನಸುಗಳು ಶೀಘ್ರಗತಿಯಲ್ಲಿ ಸಾಕಾರಗೊಳ್ಳಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ಆರ್ಯ-ಈಡಿಗ ಮಹಿಳಾ ಸಂಘದ ಗೌರವಾಧ್ಯಕ್ಷೆ ಡಾ. ನಳಿನಾಕ್ಷಿ ಸಣ್ಣಪ್ಪ, ಗೌರವಾಧ್ಯಕ್ಷ ಎಂ. ರಮೇಶ್ ಬಂಗೇರಾ, ಸಲಹಾ ಸಮಿತಿ ಅಧ್ಯಕ್ಷ ವಿಜಯಕೃಷ್ಣ ಪಡುಕೋಣೆ, ಹಿರಿಯ ಉಪಾಧ್ಯಕ್ಷ ಕೇಶವ ಪೂಜಾರಿ, ಉಪಾಧ್ಯಕ್ಷೆ ಜಲಜಾ ಶೇಖರ್, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪೂಜಾರಿ, ಜತೆ ಕಾರ್ಯದರ್ಶಿ ಎಂ.ಕೆ. ದಾಮೋದರ ಸುವರ್ಣ, ಕೋಶಾಧಿಕಾರಿ ಲೋಕನಾಥ, ಸಂಘಟನಾ ಕಾರ್ಯದರ್ಶಿ ಕೆ. ನಾರಾಯಣ ಪೂಜಾರಿ ಉಪಸ್ಥಿತರಿದ್ದರು.

ದೇವಿಪ್ರಸಾದ್ ನಿರೂಪಿಸಿದರು. ಬಿಲ್ಲವ ಅಸೋಸಿಯೇಶನ್ ಕೋಶಾಧಿಕಾರಿ ಲೋಕನಾಥ್ ವಂದಿಸಿದರು.

ಸಾಂಸ್ಕೃತಿಕ ವೈವಿಧ್ಯತೆಗಳು
ಸಭಾ ಕಾರ್ಯಕ್ರಮ ಉದ್ಘಾಟನೆಗೆ ಮುನ್ನ ಆಟಿಕಳೆಂಜ, ತುಳುನಾಡಿನ ಕೃಷಿ ಬದುಕಿನ ವೈವಿಧ್ಯ ಪರಿಕರ ಸಹಿತ ಆಕರ್ಷಕ ಮೆರವಣಿಗೆ ನಡೆಯಿತು. ಪ್ರವೇಶ ದ್ವಾರದ ಬಳಿ ಕಂಬಳ ಕೋಣಗಳ ಪ್ರತಿಬಿಂಬ, ಹಳೇ ವಸ್ತುಗಳ ಪ್ರದರ್ಶನ ಗಮನಸೆಳೆಯಿತು. ಮಹಿಳಾ ಘಟಕದವರಿಂದ ಸ್ವಾಗತ ಭಜನಾ ಕುಣಿತ, ಮಧ್ಯಾಹ್ನ ಬಳಿಕ ಶಂಕರ್ ಬಾಳ್ಕುದ್ರುರವರ ನಿರ್ದೇಶನದಲ್ಲಿ ಸಂಘದ ಸದಸ್ಯ ಕಲಾವಿದರಿಂದ ಕನ್ನಡ ಯಕ್ಷಗಾನ ಸುದರ್ಶನ ಗರ್ವಭಂಗ-ಭಾರ್ಗವ ವಿಜಯ ನಡೆಯಿತು.

ಆಟಿ ಊಟದ ವಿಶಿಷ್ಟ ತಿನಸುಗಳು
ಮಧ್ಯಾಹ್ನದ ಆಟಿಡೊಂಜಿ ದಿನದ ವಿಶೇಷ ಊಟ-ಖಾದ್ಯ-ತಿನಸುಗಳಲ್ಲಿ ಪೆಲತ್ತರಿ ಪಲ್ಯ, ಪುನರ್‌ಪುಳಿ ಸಾರು, ಅಂಬಡೆ ಉಪ್ಪಡು, ಪೊಂಬೆ ಚಟ್ನಿ ಕಣಿಲೆ ಮೊಳಕೆ ಹೆಸರುಕಾಳು ಗಸಿ, ನುರ್ಗೆಸೊಪ್ಪು, ಅಲಸಂಡೆ ಪಲ್ಯ, ತೆಕ್ಕರೆ ತಲ್ಲಿ, ಪತ್ರೋಡೆ, ಅರೇಪು ಪೆಲಕಾಯಿದ ಗಟ್ಟಿ, ತೋಜಂಕ್ ಪೆಲತರಿ ಸುಕ್ಕ, ತಿಮರೆ ಚಟ್ನಿ ಉಪ್ಪಡ್‌ಪಚ್ಚಿಲ್, ಕುಡುತ ಚಟ್ನಿ, ಹಪ್ಪಳ ಸಂಡಿಗೆ, ಉರ್ಪೆಲ್‌ಅರಿತ ನುಪ್ಪು, ಬೋಳಂತೆಅರಿತ ನುಪ್ಪು, ತೌತೆ ಕೊದ್ದೆಲ್, ಮೆಂತೆ ಗಂಜಿ, ಸೋರೆಕಾಯಿ ಪಾಯಸ, ಎಡ್ಡೆಮುಂಚಿ ಪನಾಕ ಗಮನ ಸೆಳೆಯ

Team Udayaprabha
";