ಶಿರ್ತಾಡಿ : ಶಿರ್ತಾಡಿಯ ಭುವನ ಜ್ಯೋತಿ ಕಾನೂನು ಕಾಲೇಜಿನಲ್ಲಿ ನ್ಯಾಕ್ (NAAC) ಮಾನ್ಯತೆ ಪ್ರಕ್ರಿಯೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಬೋಧಕ ವರ್ಗದ ಅಭಿವೃದ್ಧಿ ಕಾರ್ಯಕ್ರಮವನ್ನು ಅಕ್ಟೋಬರ್ 9, 2026ರಂದು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರೊ. ಸೋಜನ್ ಜಾರ್ಜ್ ಅವರು ನ್ಯಾಕ್ ಮಾನ್ಯತೆಯ ವಿವಿಧ ಆಯಾಮಗಳು, ಗುಣಮಟ್ಟದ ಶಿಕ್ಷಣದ ಮಾನದಂಡಗಳು, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ದಾಖಲೆಗಳ ನಿರ್ವಹಣೆ, ಆಂತರಿಕ ಗುಣಮಟ್ಟ ಭರವಸೆ ವ್ಯವಸ್ಥೆ (IQAC) ಮತ್ತು ಮಾನ್ಯತೆ ಪ್ರಕ್ರಿಯೆಯಲ್ಲಿ ಬೋಧಕ ವರ್ಗದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ನ್ಯಾಕ್ ಮಾನ್ಯತೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯವಿರುವ ಸಿದ್ಧತೆಗಳು ಹಾಗೂ ಗುಣಮಟ್ಟದ ಸುಧಾರಣೆಯ ವಿವಿಧ ಅಂಶಗಳ ಬಗ್ಗೆ ಅವರು ಮಾರ್ಗದರ್ಶನ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪ್ರದೀಪ್ ಎಂ.ಡಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜನೆಯನ್ನು ಡಾ. ಶೆರ್ಲಿ ಟಿ. ಬಾಬು ಅವರು ನಿರ್ವಹಿಸಿದರು. ಪ್ರೊ. ಡಿಯೋನಾ ಲಿಟಾ ಡಿಸೋಜಾ ನಿರೂಪಿಸಿದರು. ಪ್ರೊ. ಧನರಾಜ್ ಅವರು ಸ್ವಾಗತಿಸಿದರು. ಪ್ರೊ. ಅಶೋಕ ಆಚಾರ್ಯ ಪರಿಚಯಿಸಿದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಪ್ರೊ. ಶ್ರೀದೇವಿ ನಾರಾಯಣನ್, ಪ್ರೊ. ಪ್ರಿಯಾ ಜೆನಿತಾ ಡಿಸೋಜಾ, ಪ್ರೊ. ರಶ್ಮಿತಾ, ಪ್ರೊ. ಅಶ್ನಾ ಅಲೆಕ್ಸ್, ಪ್ರೊ. ಕಿರಣ್ ಎನ್. ಉಪಸ್ಥಿತರಿದ್ದರು.
ಬೋಧಕ ವರ್ಗದ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸುವುದು, ನ್ಯಾಕ್ ಮಾನ್ಯತೆಯ ಕುರಿತು ಅರಿವು ಮೂಡಿಸುವುದು ಹಾಗೂ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಪ್ರೇರಣೆ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.


,


















