ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ-ಕಾಲೇಜು ಹಾಕಿ (ಪುರುಷ ಮತ್ತು ಮಹಿಳಾ) ಪಂದ್ಯಾವಳಿ 2026-27 ರ ಕ್ರೀಡಾಕೂಟವನ್ನು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ನೇತೃತ್ವದಲ್ಲಿ ಅಕ್ಟೋಬರ್ 8, 2026 ರಂದು ಬೆಳಗಾವಿಯ ನಗರದ ಲೆಲೆ (ಸುಭಾಷ್ ಚಂದ್ರ ಬೋಸ್) ಮೈದಾನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಈ ಕ್ರೀಡಾಕೂಟದಲ್ಲಿ ವಿಶ್ವವಿದ್ಯಾಲಯದ ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಯ ಸಂಯೋಜಿತ ಕಾಲೇಜುಗಳ ತಂಡಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದವು.
ಅತ್ಯಂತ ಪೈಪೋಟಿಯ ಪಂದ್ಯಾವಳಿಯಲ್ಲಿ, ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನ ಪುರುಷರ ಹಾಕಿ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
ಪ್ರಾಚಾರ್ಯ ಪ್ರೊ. ಎಸ್. ಸಿ. ಪಾಟೀಲ, ಉಪಪ್ರಾಚಾರ್ಯ ಪ್ರೊ. ಅರ್ಜುನ್ ಜಂಬಗಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕರುಣಾ ಅಮೃಸ್ಕರ್, ಡಾ. ಗಿರಿಜಾ ಶಂಕರ್ ಮಾನೆ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ತಂಡದ ಅತ್ಯುತ್ತಮ ಪ್ರದರ್ಶನ ಮತ್ತು ಸಾಧನೆಯನ್ನು ಅಭಿನಂದಿಸಿದರು.


,

















