| Latest Version 9.0.7 |

State News

ನಮ್ಮ ಮಕ್ಕಳನ್ನು ನಾವೇ ಶಿಸ್ತು, ಶಿಕ್ಷಣದ ಮೂಲಕ ರಕ್ಷಿಸಿಕೊಳ್ಳಬೇಕು

ಬಜಪೆ : ಬಜಪೆ ಯೋಜನಾ ಕಚೇರಿ ವ್ಯಾಪ್ತಿಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಕಾವೂರು ವಲಯ ಆಕಾಶಭವನ ಕಾರ್ಯಕ್ಷೇತ್ರದ ಆಕಾಶದ ದೀಪ ಜ್ಞಾನವಿಕಾಸ ಕೇಂದ್ರದ 4ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸರಕಾರಿ ವೈದ್ಯಾಧಿಕಾರಿ ಆಯುಷ್ ವಿಭಾಗ ಡಾ.ಶೋಭಾರಾಣಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಅವರು ಮಾತನಾಡಿ, ನಾವು ಆರೋಗ್ಯವಾಗಿ ಇರಬೇಕಾದರೆ ನಮ್ಮ ಆಹಾರ ಪದ್ಧತಿಯ ಮುಖ್ಯವಾದದ್ದು ಆಹಾರ ಪದ್ಧತಿಯನ್ನು ನಾವು ಹಿತಮಿತ ಹಾಗೂ ಉತ್ತಮ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಮಹಿಳೆಯರು ತಮ್ಮ ಕುಟುಂಬ ಹಾಗೂ ಕೆಲಸದ ಒತ್ತಡದಿಂದಾಗಿ ತಮ್ಮ ಅರೋಗ್ಯವನ್ನು ತಾವೇ ಮರೆಯುತ್ತಾರೆ ಎಂದರು.

ಕಾವೂರ್ ಪೊಲೀಸ್ ಠಾಣಾ ಮಹಿಳಾ ಹೆಡ್ ಕಾನ್ಸ್ಟೇಬಲ್ ಚೈತ್ರ ಶ್ರೀ ಅವರು ಸೈಬರ್ ಕ್ರೈಂ ಬಗ್ಗೆ ತಿಳಿಸಿದರು. ವಿದ್ಯಾಭ್ಯಾಸ ಇದ್ದವರೆ ಇದಕ್ಕೆ ಬಲಿಯಾಗುತ್ತಿದ್ದಾರೆ. ಇದರ ಬಗ್ಗೆ ಜಾಗರೂಕತರಾಗಿರಬೇಕು ಎಂದರು.

ಕಾನೂನಿನ ಕಣ್ಣಿಂದ ತಪ್ಪಿಸಲು ಸಾಧ್ಯವೇ ಇಲ್ಲ. ನಮ್ಮ ಮಕ್ಕಳನ್ನು ನಾವೇ ಶಿಸ್ತು ಹಾಗೂ ಶಿಕ್ಷಣದ ಮೂಲಕ ಅವರನ್ನು ರಕ್ಷಿಸಿಕೊಳ್ಳಬೇಕು ಎಂದರು. ಯೋಜನಾಧಿಕಾರಿಗಳು ಯೋಜನೆಯಲ್ಲಿ ಮಾತೃಶ್ರೀಅಮ್ಮನವರು ಜ್ಞಾನವಿಕಾಸ ಕಾರ್ಯಕ್ರಮವನ್ನು ಹುಟ್ಟುಹಾಕಿದ ಮೂಲ ಉದ್ದೇಶ ಮಹಿಳೆಯರ ಏಳಿಗೆಗಾಗಿ ಹಾಗೂ ಶೋಷಣಿತ ಮಹಿಳೆಯರನ್ನು ಶಿಕ್ಷಿತರನ್ನಾಗಿ ಹೊರ ಜಗತ್ತಿನ ಪರಿಚಯ ಮಾಡುವ ಮೂಲ ಪರಿಕಲ್ಪನೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಜಯರಾಮ್ ಕಾವೂರು, ನಗರಸಭಾ ಸದಸ್ಯ ಕೊರಗಪ್ಪ ಶೆಟ್ಟಿ, ಮೇಲ್ವಿಚಾರಕ ಅಭಿಮಾನ್ ಜೈನ್ ಹಾಗೂ ಸಮನ್ವಯಧಿಕಾರಿ ಶೋಭಾ, ಸೇವಾ ಪ್ರತಿನಿಧಿ ಲಕ್ಷ್ಮಿ ಇನ್ನಿತರರಿದ್ದರು. ಕೇಂದ್ರದ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ರು.

Team Udayaprabha
";