ಬೆಳಗಾವಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಆರೋಪಿತನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಇಲ್ಲಿನ ಪೋಕ್ಸೊ ನ್ಯಾಯಾಲಯ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಗೋಕಾಕ ತಾಲೂಕು ಹಿರೇಹಟ್ಟಿಯ
ಲಕ್ಷ್ಮಣ ಹನುಮಂತ ಮೊಗೋಡ (28) ಶಿಕ್ಷೆಗೊಳಗಾದ ಆರೋಪಿ.
ನೇಸರಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಫಿರ್ಯಾದಿದಾರ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ಮನೆಯವರೆಲ್ಲರೂ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದು ತನ್ನ ಮಗಳು (ನೊಂದ ಬಾಲಕಿ) ಇವಳು ಅಪ್ರಾಪ್ತ ವಯಸ್ಸಿನವಳು ಅಂತಾ ಗೊತ್ತಿದರೂ ಆರೋಪಿತನಾದ ಲಕ್ಷ್ಮಣ, 27-01-2022 ರಂದು ಬಾಲಕಿಯೊಂದಿಗೆ ಸಲುಗೆ ಬೆಳೆಸಿ ಅವಳು ಶಾಲೆ ಮುಗಿಸಿಕೊಂಡು ಹೊರಟ್ಟಿದ್ದಾಗ ಆರೋಪಿತನು ಅವಳಿಗೆ ಮುಂದಿನ ಹೊಲಕ್ಕೆ ಹೊರಟೆನಿ ಬಾ ಅಂತಾ ಸುಳ್ಳು ಹೇಳಿ ತನ್ನ ಮೋಟಾರ್ ಸೈಕಲ್ ನಲ್ಲಿ ಹತ್ತಿಸಿಕೊಂಡು ಅವಳಿಗೆ ಹೊಕದ ಕಡೆಗೆ ಕರೆದುಕೊಂಡು ಹೋಗದೆ ಪಾಶ್ಚಾಪುರಕ್ಕೆ ಕರೆದುಕೊಂಡು ಹೋಗಿ ಅಲ್ಲಿ 2 ದಿನ ಕೂಡಿಟ್ಟಿದ್ದಾನೆ. ನಂತರ ಆಪಾದಿತನು ಬಾಲಕಿಗೆ ಗವನಾಳ ಗ್ರಾಮದಲ್ಲಿ ಒಬ್ಬರು ಹೊಸದಾಗಿ ಕಟ್ಟುತ್ತಿರುವ ಮನೆಯಲ್ಲಿ ಬಾಲಕಿಯನ್ನು ಕೂಡಿಟ್ಟು ಅವಳ ಮೆಲೆ ಒತ್ತಾಯದಿಂದ ನಿರಂತರವಾಗಿ ಲೈಂಗಿಕ ಅತ್ಯಾಚಾರ ಮಾಡುತ್ತಾ ಬಂದಿರುವ ಈ ಅಪರಾಧಕ್ಕೆ ದಾಖಲಾಧಿಕಾರಿ ಪಿಎಸ್ ಐ ವೈ.ಎಲ್.ಶೀಗಿಹಳ್ಳಿ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಮುಂದಿನ ತನಿಖೆಯನ್ನು ತನಿಖಾಧಿಕಾರಿ ಸಿಪಿಐ ಸಾತೇನಹಳ್ಳಿ ಅವರು ಪೂರ್ಣಗೊಳಿಸಿದರು.
ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಲೋ ನ್ಯಾಯಾಲಯ-01 ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣಿ ಪಟ್ಟಿಯನ್ನು ಸಲ್ಲಿಸಿದ್ದು, ಮಾನ್ಯ ನ್ಯಾಯಾಧೀಶರಾದ ಸಿ. ಎಂ. ಪುಷ್ಪಲತಾ ಅವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 11 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 71 ದಾಖಲೆಗಳು, 14 ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿ ಲಕ್ಷ್ಮಣನ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿತನಿಗೆ 30 ವರ್ಷ ಕಾರಾಗೃಹ ಶಿಕ್ಷೆ ದಂಡ ರೂ. ಒಂದು ಲಕ್ಷ ರೂ. ವಿಧಿಸಿ ತೀರ್ಪು ನೀಡಿದೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 4 ಲಕ್ಷಗಳನ್ನು ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿರುತ್ತದೆ.ಪರಿಹಾರ ಹಣವನ್ನು ರಾಷ್ಟ್ರಕೃತ ಬ್ಯಾಂಕಿನಲ್ಲಿ 5 ವರ್ಷಗಳವರೆಗೆ ಮುದ್ದು ಠೇವಣಿಯಾಗಿ ಇಡಲು ಮಾನ್ಯ ನ್ಯಾಯಾಲಯವು ಆದೇಶ ಮಾಡಿರುತ್ತಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಎಲ್. ವಿ ಪಾಟೀಲ ಹಾಜರಾಗಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.


,
,


















