| Latest Version 9.0.7 |

Crime News

ನುಗ್ಗಾನಟ್ಟಿಯಲ್ಲಿ ಕೌಟುಂಬಿಕ ಕಲಹ: ಜೋಡಿ ಕೊಲೆ

 

 

ಬೆಳಗಾವಿ : ಬೈಲಹೊಂಗಲ ತಾಲೂಕಿನ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ನುಗ್ಗಾನಟ್ಟಿ ಗ್ರಾಮದಲ್ಲಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿ ಇಬ್ಬರನ್ನು ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

 

ನುಗ್ಗಾನಟ್ಟಿ ಗ್ರಾಮದ ಬಸಪ್ಪ ಫಕ್ಕೀರಪ್ಪ ರಾಯಣ್ಣವರ (35) ಹಾಗೂ ಲಗಮಪ್ಪ ಫಕ್ಕೀರಪ್ಪ ರಾಯಣ್ಣವರ (34) ಕೊಲೆಯಾದವರು.

 

ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರ ಸಂಬಂಧಿಕರ ನಡುವೆ ನಡೆದ ಜಗಳದಲ್ಲಿ ಮಹಾದೇವಪ್ಪ, ಲಗಮಪ್ಪ, ಶಿವಲಿಂಗಪ್ಪ, ಶಿವಪ್ಪ, ಫಕ್ಕೀರಪ್ಪ ಹಾಗೂ ಅಣ್ಣವ್ವ ಎಂಬವರು ಸೇರಿಕೊಂಡು ಇಬ್ಬರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

 

ಘಟನೆಯ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಪಿಐ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ.

Team Udayaprabha
";