| Latest Version 9.0.7 |

State News

ಕಳಮಣಿಯಲ್ಲಿ ಕಾಡಾನೆಗಳ ಹಾವಳಿ: ಬೆಳೆ ಹಾನಿ ಪರಿಶೀಲಿಸಿದ ಸದಾನಂದ ಪಾಟೀಲ

ಖಾನಾಪುರ: ಕಳಮಣಿ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಹಿನ್ನೆಲೆಯಲ್ಲಿ, ಶುಕ್ರವಾರ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಸೂಚನೆ ಮೇರೆಗೆ, ಭಾರತೀಯ ಜನತಾ ಪಕ್ಷದ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಹಾಗೂ ಲೈಲಾ ಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಅವರು ರೈತರ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಕೆಲವು ರೈತರು ಬೆಳೆ ಹಾನಿ ಪರಿಹಾರ ಪಡೆಯಲು ಅಗತ್ಯವಿರುವ ದಾಖಲೆಗಳು ಸಕಾಲದಲ್ಲಿ ದೊರೆಯುತ್ತಿಲ್ಲ ಎಂದು ಸದಾನಂದ ಪಾಟೀಲ ಅವರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ತಕ್ಷಣ ಸಂಪರ್ಕಿಸಿ, ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಪರಿಹಾರ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಯಾವುದೇ ವಿಳಂಬವಿಲ್ಲದೆ ತ್ವರಿತವಾಗಿ ಒದಗಿಸಿಕೊಡಬೇಕೆಂದು ಮನವಿ ಮಾಡಲಾಯಿತು.

ದೌಲತ್ ಕೊಳಿಕಾರ, ಕೃಷ್ಣ ಪು. ಭಾರಣಕರ, ಭೀಮರಾವ್ ಭಾರಣಕರ, ಮಹಾದೇವ ಭಾರಣಕರ, ಸೋಮಾಜಿ ಭಾರಣಕರ, ದಿನಕರ ಭಾರಣಕರ, ಶಂಕರ ಭಾರಣಕರ, ಸಂತೋಷ ಭಾರಣಕರ, ಮಾರುತಿ ಭಾರಣಕರ, ಅಂಕುಶ ಭಾರಣಕರ, ವಿನಾಯಕ ಪಿಳಣಕರ, ಯೋಗೇಶ ನಾಯ್ಕ, ವಿಶ್ವನಾಥ ಭಾರಣಕರ, ಸಾತೇರಿ ಭಾರಣಕರ, ಕೃಷ್ಣ ಇ. ಭಾರಣಕರ ಹಾಗೂ ತಾನಾಜಿ ಭಾರಣಕರ ಸೇರಿದಂತೆ ರೈತರು ಉಪಸ್ಥಿತರಿದ್ದರು.

Team Udayaprabha
";