ಬೆಳಗಾವಿ/ಬೆಂಗಳೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ್ರಸಕ್ತ ಸಾಲಿನ ‘ಮಹದೇವ ಪ್ರಕಾಶ್’ ಪ್ರಶಸ್ತಿಗೆ ವಿಜಯ ಕರ್ನಾಟಕದ ಬೆಳಗಾವಿ-ಬಾಗಲಕೋಟೆ ಅವೃತ್ತಿಯ ಸ್ಥಾನಿಕ ಸಂಪಾದಕ ಕೆ. ಸುರೇಶ್ ಸೇರಿದಂತೆ 28 ಮಂದಿಯನ್ನು ನಾನಾ ದತ್ತಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಪ್ರತಿಷ್ಠಿತ ‘ದತ್ತಿನಿಧಿ ಪ್ರಶಸ್ತಿ’ಗಳನ್ನು ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಹಾಗೂ ಮಾಧ್ಯಮ ರಂಗದ ಸಾಧನೆಗಳನ್ನು ಪರಿಗಣಿಸಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಪತ್ರಕರ್ತರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5 ಸಾವಿರ ರೂ. ನಗದು ಬಹುಮಾನ, ಪ್ರಶಸ್ತಿ ಫಲಕ ಒಳಗೊಂಡಿದೆ. ಚಿಕ್ಕಮಗಳೂರಿನಲ್ಲಿ ಜು. 25ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುರೇಶ್ ಪರಿಚಯ :
ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಮೂಲದವರಾದ ಸುರೇಶ್ ಅವರು ಬೆಳಗಾವಿಯ ಜೊತೆಗೆ ಬಾಗಲಕೋಟೆ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕರಾಗಿ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಮೊದಲು ವಿಜಯವಾಣಿ, ಉದಯವಾಣಿ, ರೂಪತಾರಾ, ಹೊಸದಿಗಂತ ಪತ್ರಿಕೆಗಳಲ್ಲಿ ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ಅಪಾರವಾದ ಅನುಭವ ಹೊಂದಿದ್ದಾರೆ. ಇವರ ಅನುಪಮ ಪತ್ರಿಕಾ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.ಕೆ.ಎಚ್. ರುದ್ರಯ್ಯ ಪ್ರಶಸ್ತಿ: ರವಿಪ್ರಕಾಶ್,
ಗೊಮ್ಮಟ ಮಾಧ್ಯಮ ಪ್ರಶಸ್ತಿ: ಗಿರೀಶ್ ರಾವ್ ಹತ್ವಾರ್ (ಜೋಗಿ), ಎಚ್. ಎಸ್. ದೊರೆಸ್ವಾಮಿ ಡಿವಿಜಿ ಪ್ರಶಸ್ತಿ: ಬಿ.ವಿ.ಗೋಪಿನಾಥ್ ಕೋಲಾರ, ಜಯಶೀಲರಾವ್ ಪ್ರಶಸ್ತಿ: ಮೀನಾ ಮೈಸೂರು, ಸಿ.ಆರ್.ಕೃಷ್ಣರಾವ್: ಅನಂತ ಚಿನಿವಾರ, ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ: ಜಾನ್ ಮಥಾಯಿಸ್, ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ: ಮಾವಳ್ಳಿ ಶಂಕರ್, ಪಾಟೀಲ್ ಪುಟ್ಟಪ್ಪ ಪ್ರಶಸ್ತಿ: ಅಡಿವೇಂದ್ರ ಇನಾಂದಾರ. ವಿಶೇಷ ಪ್ರಶಸ್ತಿ: ಇಬ್ರಾಹಿಂ ಅಡ್ಡಸ್ಥಳ, ಮಂಗಳೂರು.
Udaya Prabha > State News > ವಿಜಯ ಕರ್ನಾಟಕ ಬೆಳಗಾವಿ-ಬಾಗಲಕೋಟೆ ಆವೃತ್ತಿಯ ಸ್ಥಾನಿಕ ಸಂಪಾದಕ ಕೆ. ಸುರೇಶ್ ಸೇರಿ 28 ಪತ್ರಕರ್ತರಿಗೆ ದತ್ತಿ ಪ್ರಶಸ್ತಿ
ವಿಜಯ ಕರ್ನಾಟಕ ಬೆಳಗಾವಿ-ಬಾಗಲಕೋಟೆ ಆವೃತ್ತಿಯ ಸ್ಥಾನಿಕ ಸಂಪಾದಕ ಕೆ. ಸುರೇಶ್ ಸೇರಿ 28 ಪತ್ರಕರ್ತರಿಗೆ ದತ್ತಿ ಪ್ರಶಸ್ತಿ
Team Udayaprabha22/07/2026
posted on

the authorTeam Udayaprabha
All posts byTeam Udayaprabha
Leave a reply

,
,

















