| Latest Version 9.0.7 |

Health & Fitness

ಬೇಸಿಗೆಯ ತಂಪು ಪಾನೀಯ ಕೋಕಂ ಜ್ಯೂಸ್ ಆರೋಗ್ಯಕ್ಕೆ ಸಂಜೀವಿನಿ

 

ಕೋಕಂ ಒಂದು ಪ್ರಾಕೃತಿಕ ಮತ್ತು ಆರೋಗ್ಯಕರ ಪಾನೀಯವಾಗಿದ್ದು ಇದು ದಕ್ಷಿಣ ಭಾರತದ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಇದರ ವೈಜ್ಞಾನಿಕ ಹೆಸರು (Garcinia indica, ) ಗಾರ್ಸಿನಿಯಾ ಇಂಡಿಕಾ ಆಡು ಭಾಷೆಯಲ್ಲಿ ಇದಕ್ಕೆ ಪುನರ್ಪುಳಿ ಮತ್ತು ಅಮಸೋಲ್ ಎಂದು ಕೂಡ ಕರೆಯುತ್ತಾರೆ, ಬೇಸಿಗೆಯ ಕಾಲದಲ್ಲಿ ದೇಹಕ್ಕೆ ತಂಪು ನೀಡುವ ಉತ್ತಮ ಪಾನೀಯಗಳಲ್ಲಿ ಕೋಕಂ ಜ್ಯೂಸ್ ಪ್ರಮುಖವಾಗಿದೆ.

ಬೇಸಿಗೆಯ ಧಗೆಯನ್ನು ನೀಗಿಸಲು ಕೃತಕ ಪಾನೀಯಗಳ ಮೊರೆಹೋಗುವ ಬದಲು ಕೋಕಂ ಅತ್ಯಂತ ಉತ್ತಮ ಪಾನೀಯವಾಗಿದೆ. ಆಯುರ್ವೇದದ ಪ್ರಕಾರ ಕೋಕಂ ದೇಹದ ಪಿತ್ತ ದೋಷವನ್ನು ಶಮನಗೊಳಿಸುವ ಗುಣ ಹೊಂದಿದೆ.
ಕೋಕಂ ಹಣ್ಣು ಕೆಂಪು ನೇರಳೆ ಬಣ್ಣ ಹೊಂದಿದ್ದು ಅದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ವಿಟಮಿನ್ ಸಿ ಮತ್ತು ವಿವಿಧ ಪೋಷಕಾಂಶಗಳ ಅಗರವಾಗಿರುವುದರಿಂದ ಇದು ಆರೋಗ್ಯಕ್ಕೆ ಬಹಳ ಉಪಯುಕ್ತ, ಕೋಕಮ್ ಜ್ಯೂಸ್ ದೇಹವನ್ನು ತಂಪಾಗಿಡುತ್ತದೆ ಮತ್ತು ದಾಹವನ್ನು ತಣಿಸುತ್ತದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಅಜೀರ್ಣ ಆಮ್ಲಪಿತ್ತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾದಾಗ ಕೋಕಂ ಜ್ಯೂಸ್ ಸೇವಿಸುವುದರಿಂದ ತಕ್ಷಣ ಶಮನ ದೊರೆಯುತ್ತದೆ ಇದು ದೇಹದ ದಾಹ ದೌರ್ಬಲ್ಯ ಮತ್ತು ಆಲಸ್ಯವನ್ನು ಕಡಿಮೆ ಮಾಡುತ್ತದೆ ಕೆಲವು ಅಧ್ಯಯನಗಳ ಪ್ರಕಾರ ಕೋಕಂನಲ್ಲಿ ಇರುವ ಹೈಡ್ರಾಕ್ಸಿ ಸಿಟ್ರಿಕ್ ಆಮ್ಲ(HCA) ತೂಕ ಇಳಿಕೆಗೆ ಸಹ ಸಹಾಯಕವಾಗಿದೆ.
ಕೋಕಮ್ ಜ್ಯೂಸ್ ತಯಾರಿಸುವ ವಿಧಾನವು ಕೂಡ ಸರಳವಾಗಿದೆ ಬೀಜ ತೆಗೆದು ಒಣಗಿದ ಕೋಕಮ್ ಅನ್ನು ನೀರಿನಲ್ಲಿ ತೊಳೆದು ಬಿಸಿ ನೀರಿನಲ್ಲಿ ಎರಡರಿಂದ ಮೂರು ತಾಸು ನೆನೆಸಿ ಅದೇ ನೀರಿನಲ್ಲಿ ಅದನ್ನು ರುಬ್ಬಿಕೊಂಡು ನಂತರ ಸೋಸಿ ಅದಕ್ಕೆ ಸಕ್ಕರೆ ಅಥವಾ ಬೆಲ್ಲ, ಸೈಂದವ ಉಪ್ಪು, ಹುರಿದ ಜೀರಿಗೆ ಪುಡಿ, ಏಲಕ್ಕಿ ಪುಡಿ ಸೇರಿಸಿ ಮಂದ ಉರಿಯಲ್ಲಿ ಐದರಿಂದ ಎಂಟು ನಿಮಿಷ ಕುದಿಸಿ ಆರಿಸಿ ಫ್ರಿಡ್ಜ್ ನಲ್ಲಿ ಸ್ವೀಕರಿಸಿಟ್ಟುಕೊಳ್ಳಬಹುದು ನಾವು ಕುಡಿಯುವಾಗ ಅದಕ್ಕೆ ಮತ್ತಷ್ಟು ನೀರು ಸೇರಿಸಿ ಕುಡಿಯಬಹುದು
ಒಟ್ಟಿನಲ್ಲಿ ಕೋಕಂ ಜ್ಯೂಸ್ ಆರೋಗ್ಯಕರ ಮತ್ತು ಪ್ರಕೃತಿಯ ಕೊಡುಗೆಯಾದ ಪಾನೀಯವಾಗಿದೆ ಆದ್ದರಿಂದ ಬೇಸಿಗೆಯಲ್ಲಿ ದಿನನಿತ್ಯವೂ ಕೋಕಂ ಜ್ಯೂಸನ್ನು ಸೇವಿಸುವುದು ಉತ್ತಮ ಅಭ್ಯಾಸವಾಗಿದೆ.

-ಡಾ.ಕಸ್ತೂರಿ ವೀರೇಶ ಕರಮುಡಿ, ಆಯುರ್ವೇದ ವೈದ್ಯರು, ಕೊಪ್ಪಳ

Team Udayaprabha
";