| Latest Version 9.0.7 |

National News

ಹಿಂದೂಗಳ ಸಾಮೂಹಿಕ ಹತ್ಯೆಗೆ ಸಂಚು: ಅಮೆರಿಕದಲ್ಲಿ 19 ವರ್ಷದ ಯುವಕನ ಬಂಧನ

 

 

ನ್ಯೂಯಾರ್ಕ್: ದೇವಾಲಯದಲ್ಲಿ ಹಿಂದೂಗಳ ಸಾಮೂಹಿಕ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಅಮೆರಿಕದಲ್ಲಿ 19 ವರ್ಷದ ಯುವಕನನ್ನು ಬಂಧಿಸಲಾಗಿದೆ.

 

ಇಲಿನಾಯ್ಸ್ ರಾಜ್ಯದ ಅರೋರಾದಲ್ಲಿರುವ ಹಿಂದೂ ದೇಗುಲದಲ್ಲಿ ಈ ದಾಳಿಗೆ ಸಂಚು ರೂಪಿಸಿದ್ದ ಎಂದು ವರದಿ ತಿಳಿಸಿದೆ. ಬಂಧಿತನನ್ನು ಅಲೆಕ್ಸಾಂಡ್ರಸ್ ಪಪೊರಕಿಸ್ ಎಂದು ಗುರುತಿಸಲಾಗಿದೆ.

 

ಆತನಿಂದ ಬಿಳಿಯರ ಪ್ರಾಬಲ್ಯವಾದಿ ಸಿದ್ಧಾಂತ ಮತ್ತು ಭಾರತ ಮೂಲದವರ ವಿರುದ್ಧ ಹಿಂಸಾಚಾರ ಪ್ರಚೋದಿಸುವ ಉಲ್ಲೇಖವಿದ್ದ ಬರಹಗಳನ್ನು ವಶಕ್ಕೆ ಪಡೆಯಲಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಹಿಂದೂಗಳು ನವರಾತ್ರಿ ಸಂಭ್ರಮದಲ್ಲಿರುವಾಗಲೇ ದಾಳಿಗೆ ಸಂಚು ನಡೆದಿದೆ.

 

ಓಹಿಯೊದ ರಿಡ್ಕಂಡ್‌ ಹೈಟ್ಸ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ವಡ್ತಾಲ್ ಧಾಮ್ ಹಿಂದೂ ಮಂದಿರದ ಮೇಲೆ ದಾಳಿ ಬೆನ್ನಲ್ಲೇ ಮತ್ತೊಂದು ದುಷ್ಕೃತ್ಯದ ಸಂಚು ಬಯಲಾಗಿದೆ.

 

 

 

10ರಂದು ಪಲಟೈಲ್ ಪೊಲೀಸ್ ಇಲಾಖೆಯು ಮೌಂಟ್ ಪ್ರಾಸ್ಪೆಟ್ ಪೊಲೀಸರಿಗೆ ತಿಳಿಸಿದ್ದರು.

 

 

 

ಎಲೆಕ್ಟ್ರಾನಿಕ್ ಸಂವಹನದ ಮೂಲಕ ಪಪೊರಕಿಸ್‌ನಿಂದ ಮಾಹಿತಿ ದೊರೆತಿರುವುದಾಗಿ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 

ಬಂಧಿತ ಪಪೊರಕಿಸ್, ಸಾಮೂಹಿಕ ಗುಂಡಿನ ದಾಳಿ ನಡೆಸುವ ಯೋಜನೆಯ ಮಾಹಿತಿ ಹಂಚಿಕೊಂಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೇ, ರೈಫಲ್, ರೈಫಲ್ ಮ್ಯಾಗಜಿನ್ ಮತ್ತಿತರ ಮಾರಕಾಸ್ತ್ರಗಳ ಚಿತ್ರವನ್ನೂ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 

ಅಕ್ಟೋಬ‌ರ್ 11ರಂದು ಈ ದಾಳಿಗೆ ಸಂಚು ರೂಪಿಸಿದ್ದ ಆತನನ್ನು ಮನೆಯಿಂದ ಹೊರಡುವಾಗಲೇ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

 

ಬಳಿಕ, ಆತನ ಮನೆಯ ಶೋಧ ಕಾರ್ಯಾಚರಣೆ ವೇಳೆ, ರೈಫಲ್, ನೂರಾರು ಸುತ್ತು ಮದ್ದುಗುಂಡು, ಲೋಡ್ ಆಗಿರುವ ರೈಫಲ್, ರಕ್ಷಾಕವಚ ಮತ್ತು ಇತರೆ ವಸ್ತುಗಳು ಪತ್ತೆಯಾಗಿವೆ.

Team Udayaprabha
";