| Latest Version 9.0.7 |

Local News

ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ರವಿವಾರ ಪೋಷಕರ ಕಾರ್ಯಾಗಾರ

ಬೆಳಗಾವಿ: ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ 134 ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಅಕ್ಟೋಬರ್ 25 ರ ರವಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1:45 ರವರೆಗೆ ಕೋಟೆ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಪೋಷಕರ ಕಾರ್ಯಾಗಾರ ಏರ್ಪಡಿಸಲಾಗಿದೆ.

ಮಕ್ಕಳಲ್ಲಿ ವಿವೇಕ ಮತ್ತು ಇಚ್ಛಾಶಕ್ತಿಯ ವಿಕಾಸ ವಿಷಯವಾಗಿ ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದ ಮಾತನಾಡುವರು. ಮನಸೆಂಬ ಖಾಲಿ ಸ್ಲೇಟು ವಿಷಯವಾಗಿ ನಿರೂಪಕ, ಬರಹಗಾರ ಮತ್ತು ಭಾಷಣಕಾರ ನಾ. ಸೋಮೇಶ್ವರ ಮಾತನಾಡುವರು. ಹೊಸ ಜಗತ್ತು, ಹೊಸ ನಿಯಮಗಳು ವಿಷಯವಾಗಿ “ಮನಸು” ಸಂಸ್ಥಾಪಕ, ವೃತ್ತಿ ಮಾರ್ಗದರ್ಶಕ ಧಾರವಾಡದ ಮಹೇಶ ಮಾಸಾಳ ಮಾತನಾಡುವರು ಎಂದು ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Team Udayaprabha
";