ಬೆಂಗಳೂರು: ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ‘ಸ್ಟಿಂಗ್’ ಕಾರ್ಯಾಚರಣೆಯ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ದೆಹಲಿಯಲ್ಲೇ ಕುಳಿತು ವಿಡಿಯೊ ಅಪ್ಲೋಡ್ ಮಾಡಿದ್ದು ರಿತೇಶ್ ಪಾಂಡೆ ಎಂಬ ವ್ಯಕ್ತಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಈ ಉದ್ದೇಶಕ್ಕಾಗಿಯೇ ‘ಕರ್ನಾಟಕ ಹನಿಟ್ರ್ಯಾಪ್’ ಹೆಸರಿನಲ್ಲಿ ರಿತೇಶ್ ಯೂಟ್ಯೂಬ್ ವಾಹಿನಿ ತೆರೆದಿದ್ದರು. ವಾರದ ಮೊದಲೇ ತಮಗೆ ತಲುಪಿದ್ದ ಪೆನ್ಡ್ರೈವ್ನಲ್ಲಿದ್ದ ‘ಸ್ಟಿಂಗ್’ ಕಾರ್ಯಾಚರಣೆಯ ವಿಡಿಯೊವನ್ನು ಅಪ್ಲೋಡ್ ಮಾಡಿದ್ದರು. ಇದಕ್ಕಾಗಿ ₹50 ಸಾವಿರ ಹಣ ಪಡೆದಿರುವುದು ತನಿಖೆಯಿಂದ ದೃಢಪಟ್ಟಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.
ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಸಿಸಿಬಿ ಪೊಲೀಸರು, ರಿತೇಶ್ ಪಾಂಡೆ (22) ಅವರನ್ನು ಬಂಧಿಸಿ ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದರು. ಆರೋಪಿಯನ್ನು ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಕರೆತಂದು, 66ನೇ ಸೆಷನ್ಸ್ ಕೋರ್ಟ್ಗೆ ಹಾಜರುಪಡಿಸಿದ್ದರು. ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದರಿಂದ ರಿತೇಶ್ ಅವರನ್ನು ಬಿಡುಗಡೆ ಮಾಡಲಾಗಿದೆ.
‘ದೆಹಲಿಯ ಗಾಜಿಯಾಬಾದ್ನಲ್ಲಿ ರಿತೇಶ್ ನೆಲಸಿದ್ದರು. ಆರೋಪಿಯ ವಿಚಾರಣೆ ವೇಳೆ ಸ್ಟಿಂಗ್ ಕಾರ್ಯಾಚರಣೆ ಕುರಿತು ಹಲವು ಮಹತ್ವದ ಸಂಗತಿಗಳು ಲಭ್ಯವಾಗಿವೆ’ ಎಂದು ಮೂಲಗಳು ಹೇಳಿವೆ.
‘ಸಿಮ್ ಕಾರ್ಡ್ ಬಳಸದೆ ವೈ-ಫೈ ಮೂಲಕ ಇಂಟರ್ನೆಟ್ ಸಂಪರ್ಕಿಸಬಹುದಾದ ಮೊಬೈಲ್ಗಾಗಿ ಅವರು ಹುಡುಕಾಟ ನಡೆಸಿದ್ದರು. ಬಳಿಕ, ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿರುವ ಮಾರುಕಟ್ಟೆಯಲ್ಲಿ ₹15 ಸಾವಿರ ನೀಡಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದರು. ಮೊಬೈಲ್ಗೆ ಸಿಮ್ ಹಾಕಿದರೂ ವರ್ಕ್ ಆಗಬಾರದು ಎಂದು ಹೇಳಿ ಅಂತಹ ಮೊಬೈಲ್ ಅನ್ನೇ ಆರೋಪಿ ಖರೀದಿಸಿದ್ದರು’ ಎಂದು ಮೂಲಗಳು ಹೇಳಿವೆ.
‘ರಿತೇಶ್ ಪಾಂಡೆ ವಾರದ ಮೊದಲೇ ತಮಗೆ ತಲುಪಿದ್ದ ಪೆನ್ಡ್ರೈವ್ ಅನ್ನು ಒಟಿಜಿ ಅಡಾಪ್ಟರ್ ಮೂಲಕ ಮೊಬೈಲ್ಗೆ ಜೋಡಿಸಿ, ಅದರಲ್ಲಿದ್ದ ಸ್ಟಿಂಗ್ ವಿಡಿಯೊವನ್ನು ವೀಕ್ಷಿಸಿದ್ದರು. ಬಳಿಕ, ಅದೇ ಮೊಬೈಲ್ಗೆ ವೈ-ಫೈ ಮೂಲಕ ಇಂಟರ್ನೆಟ್ ಸಂಪರ್ಕ ಕಲ್ಪಿಸಿ, ‘ಕರ್ನಾಟಕ ಹನಿಟ್ರ್ಯಾಪ್’ ಹೆಸರಿನಲ್ಲಿ ಯೂಟ್ಯೂಬ್ ಖಾತೆ ತೆರೆದಿದ್ದರು. ಆ ಖಾತೆಯ ಮೂಲಕವೇ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ‘ಸ್ಟಿಂಗ್’ ಕಾರ್ಯಾಚರಣೆ ವಿಡಿಯೊವನ್ನು ಅಪ್ಲೋಡ್ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.
ಅಪ್ಲೋಡ್ಗೆ ಹಣ: ಯೂಟ್ಯೂಬ್ನಲ್ಲಿ ವಿಡಿಯೊ ಅಪ್ಲೋಡ್ ಮಾಡುವಂತೆ ರಿತೇಶ್ ಪಾಂಡೆಗೆ ಸೂಚಿಸಿದ್ದವರು ಯಾರು, ಪೆನ್ಡ್ರೈವ್ ತಲುಪಿಸಿದ್ದವರು
ಯಾರು ಎಂಬುದರ ಪತ್ತೆಗಾಗಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
ರಿತೇಶ್ ಮೊಬೈಲ್ ಖರೀದಿಸಿದ್ದ ಬಿಲ್, ಅಲ್ಲಿನ ಸಿ.ಸಿ.ಟಿ.ವಿ ದೃಶ್ಯಗಳನ್ನೂ ಪರಿಶೀಲಿಸಲಾಗಿದೆ. ಆರೋಪಿ ಅಂಗಡಿಗೆ ಬಂದುಹೋಗಿರುವ ದೃಶ್ಯಗಳು ಲಭಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮಹಿಳೆಯ ಹೇಳಿಕೆ ದಾಖಲು: ಸ್ಟಿಂಗ್ ವಿಡಿಯೊದಲ್ಲಿರುವ ಮಹಿಳೆಯನ್ನು ಪತ್ತೆ ಮಾಡಿ, ಅವರ ಹೇಳಿಕೆಯನ್ನು ದಾಖಲು ಮಾಡಲಾಗಿದೆ.
‘ನಿಮ್ಮನ್ನು ಯಾರು ಸಂಪರ್ಕಿಸಿದ್ದರು, ಮಾತುಕತೆಯ ಸಂದರ್ಭದಲ್ಲಿ ಇದ್ದವರು ಯಾರು, ಯಾವ ಸಮಯದಲ್ಲಿ ವಿಡಿಯೊ ಚಿತ್ರೀಕರಣ ಮಾಡಲಾಗಿತ್ತು, ವಿಡಿಯೊ ಮಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿತ್ತೇ ಎಂಬಂತಹ ಪ್ರಶ್ನೆಗಳನ್ನು ಕೇಳಿ, ಹೇಳಿಕೆ ದಾಖಲಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಎಂಬುದಷ್ಟೇ ನನಗೆ ಗೊತ್ತು. ಆದರೆ, ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ’ ಎಂದು ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಮಹಿಳೆಯು ತನಿಖಾಧಿಕಾರಿಗಳ ಎದುರು ಹೇಳಿಕೆ ದಾಖಲಿಸಿದ್ದಾರೆ.
ಅವಹೇಳನಕಾರಿ ಹಾಗೂ ಮಾನಹಾನಿಕರ ವಿಡಿಯೊವೊಂದನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ, ಸಿದ್ದರಾಮಯ್ಯ ಅವರು ಅಕ್ಟೋಬರ್ 6ರಂದು ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದರು. ಆ ದೂರು ಆಧರಿಸಿ ತನಿಖೆ
ಯಾರು ಎಂಬುದರ ಪತ್ತೆಗಾಗಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
ರಿತೇಶ್ ಮೊಬೈಲ್ ಖರೀದಿಸಿದ್ದ ಬಿಲ್, ಅಲ್ಲಿನ ಸಿ.ಸಿ.ಟಿ.ವಿ ದೃಶ್ಯಗಳನ್ನೂ ಪರಿಶೀಲಿಸಲಾಗಿದೆ. ಆರೋಪಿ ಅಂಗಡಿಗೆ ಬಂದುಹೋಗಿರುವ ದೃಶ್ಯಗಳು ಲಭಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮಹಿಳೆಯ ಹೇಳಿಕೆ ದಾಖಲು: ಸ್ಟಿಂಗ್ ವಿಡಿಯೊದಲ್ಲಿರುವ ಮಹಿಳೆಯನ್ನು ಪತ್ತೆ ಮಾಡಿ, ಅವರ ಹೇಳಿಕೆಯನ್ನು ದಾಖಲು ಮಾಡಲಾಗಿದೆ.
‘ನಿಮ್ಮನ್ನು ಯಾರು ಸಂಪರ್ಕಿಸಿದ್ದರು, ಮಾತುಕತೆಯ ಸಂದರ್ಭದಲ್ಲಿ ಇದ್ದವರು ಯಾರು, ಯಾವ ಸಮಯದಲ್ಲಿ ವಿಡಿಯೊ ಚಿತ್ರೀಕರಣ ಮಾಡಲಾಗಿತ್ತು, ವಿಡಿಯೊ ಮಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿತ್ತೇ ಎಂಬಂತಹ ಪ್ರಶ್ನೆಗಳನ್ನು ಕೇಳಿ, ಹೇಳಿಕೆ ದಾಖಲಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಎಂಬುದಷ್ಟೇ ನನಗೆ ಗೊತ್ತು. ಆದರೆ, ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ’ ಎಂದು ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಮಹಿಳೆಯು ತನಿಖಾಧಿಕಾರಿಗಳ ಎದುರು ಹೇಳಿಕೆ ದಾಖಲಿಸಿದ್ದಾರೆ.
ಅವಹೇಳನಕಾರಿ ಹಾಗೂ ಮಾನಹಾನಿಕರ ವಿಡಿಯೊವೊಂದನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ, ಸಿದ್ದರಾಮಯ್ಯ ಅವರು ಅಕ್ಟೋಬರ್ 6ರಂದು ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದರು. ಆ ದೂರು ಆಧರಿಸಿ ತನಿಖೆ ನಡೆಯುತ್ತಿದೆ.
ರಾಹುಲ್ ಗಾಂಧಿ ಅವರೇ ನೀವು ಮೊಹಬ್ಬತ್ನ ಮಾತನಾಡುತ್ತೀರಿ. ಕರ್ನಾಟಕದಲ್ಲಿ ನಿಮ್ಮ ಪಕ್ಷದ ನಾಯಕರೇ ಸ್ಟಿಂಗ್ ಕಾರ್ಯಾಚರಣೆ ರೂಪದಲ್ಲಿ ಪರಸ್ಪರರ ಬೆನ್ನಿಗೆ ಚೂರಿ ಹಾಕಿಕೊಳ್ಳುತ್ತಿದ್ದು ನಿಮ್ಮ ಬೆನ್ನಿಗೂ ಚೂರಿ ಹಾಕುತ್ತಿದ್ದಾರೆ. ಇದೇನಾ ನಿಮ್ಮ ಮೊಹಬ್ಬತ್ ಕೀ ದುಖಾನ್? ಯಾವ ರೀತಿಯಲ್ಲಿ ಸ್ಟಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂಬುದನ್ನು ಸಚಿವರು ಶಾಸಕರೇ ತೆರೆದಿಡುತ್ತಿದ್ದಾರೆ. ಇದಕ್ಕಿಂತ ಅಧೋಗತಿ ಬೇಕಾ? ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಆಡಳಿತ ಕೊಳೆತು ನಾರುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕಾ?
ಆರ್. ಅಶೋಕ ವಿರೋಧ ಪಕ್ಷದ ನಾಯಕ
‘ಸ್ಟಿಂಗ್ ಕಾರ್ಯಾಚರಣೆ’ ಪ್ರಕರಣದಲ್ಲಿ ತನಿಖೆಗೆ ಸಹಕರಿಸದೆ ತಲೆಮರೆಸಿಕೊಂಡಿರುವ ಮೂವರೂ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಎಡಗೈ-ಬಲಗೈ. ಈ ಮೂವರು ಎಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎನ್ನುವುದನ್ನು ಅವರೇ ಹೇಳಿ ತನಿಖೆಗೆ ಕಳುಹಿಸಲಿ. ಸ್ಟಿಂಗ್ ಮಾಡಿದ್ದು ಯಾರು ಏಕೆ ಮಾಡಿದ್ದು ಅವರ ಹಿಂದೆ ಯಾರಿದ್ದಾರೆ ಇಷ್ಟು ವರ್ಷ ಆದ ಮೇಲೆ ಯಾರ ಕೈಗೆ ಸಿಕ್ಕಿತು ಇದ್ದಕ್ಕಿದ್ದಂತೆ ಏಕೆ ಅಪ್ಲೋಡ್ ಆಯಿತು ಎಂಬುದೆಲ್ಲವೂ ಶೀಘ್ರ ಬಯಲಾಗಲಿದೆ.
ಪ್ರಿಯಾಂಕ್ ಖರ್ಗೆ ಗೃಹ ಸಚಿವ
ಸಿದ್ದರಾಮಯ್ಯ ಮತ್ತು ಅವರ ಮಗ ಹೇಳಿದ ಹೆಸರುಗಳ ವ್ಯಕ್ತಿಗಳನ್ನು ಇವರು ರಕ್ಷಣೆ ಮಾಡುತ್ತಿದ್ದಾರೆ. ರಾಕೇಶ್ ಶೆಟ್ಟಿ ಕೃಪಾ ಆಳ್ವ ಯಾಕೆ ಸ್ಟಿಂಗ್ ಮಾಡಿದರು ಯಾರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲು ಕುತಂತ್ರ ರೂಪಿಸಿದ್ದರು ಎಂಬುದರ ಬಗ್ಗೆ ಗೃಹ ಸಚಿವರು ಹೇಳಬೇಕು. ಸಿದ್ದರಾಮಯ್ಯ ಅವರನ್ನು ಹೇಗಾದರೂ ಅಧಿಕಾರದಿಂದ ಕೆಳಕ್ಕೆ ಇಳಿಸಬೇಕು ಎಂಬ ದುರುದ್ದೇಶದಿಂದ ಸ್ಟಿಂಗ್ ಅನ್ನು ಗುರಾಣಿಯಾಗಿ ಬಳಸಿಕೊಂಡರು. ಈ ವಿಷಯ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಹಲವು ನಾಯಕರಿಗೆ ಗೊತ್ತಿದೆ.
ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಸೂತ್ರಧಾರನ ಪತ್ತೆಗೆ ತನಿಖೆ ಚುರುಕು
ವಿಡಿಯೊ ಅಪ್ಲೋಡ್ ಮಾಡಿದ್ದ ವ್ಯಕ್ತಿ ಅದರ ಲಿಂಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದವರನ್ನು ಪತ್ತೆ ಮಾಡಲಾಗಿದೆ. ಹಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ. ಸದ್ಯ ಪ್ರಕರಣದ ಸೂತ್ರಧಾರನ ಪತ್ತೆಗೆ ತನಿಖೆ ಚುರುಕು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು. ‘ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡ ಚಂದನ್ಗೆ ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಚಂದನ್ ಅವರ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಲಾಗಿದೆ. ಮೋಹನ್ ಗೌಡ ವಿಚಾರಣೆಗೆ ಹಾಜರಾಗಿಲ್ಲ. ಅವರು ಜೆಡಿಎಸ್ನ ವಾರ್ ರೂಂನಲ್ಲಿ ಕೆಲಸ ಮಾಡುತ್ತಿದ್ದರು.
ಈ ಪ್ರಕರಣದಲ್ಲಿ ಅನ್ವಯ ಆಗಿರುವ ಸೆಕ್ಷನ್ಗಳಿಗೆ ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಲು ಅವಕಾಶ ಇದೆ. ಇದೇ ಪ್ರಕರಣದಲ್ಲಿ ‘ಪವರ್’ ಸುದ್ದಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಲಭಿಸಿದೆ. ಈ ಅಂಶಗಳನ್ನು ಮುಂದಿಟ್ಟುಕೊಂಡು ರಿತೇಶ್ ಪಾಂಡೆ ಪರವಾಗಿ ವಕೀಲರು ವಾದ ಮಂಡಿಸಿ ಜಾಮೀನು ಕೋರಿದರು. ನ್ಯಾಯಾಲಯವು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ. ತನಿಖೆಗೆ ಸಹಕರಿಸಬೇಕು ನಗರ ಬಿಟ್ಟು ತೆರಳುವಾಗ ಪೊಲೀಸರಿಗೆ ಮಾಹಿತಿ ನೀಡಬೇಕು ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದಾಗ ಹಾಜರಾಗಬೇಕೆಂದು ನ್ಯಾಯಾಲಯವು ಷರತ್ತು ವಿಧಿಸಿದೆ.
Udaya Prabha > Local News > ಮಾಜಿ ಸಿಎಂ ಸ್ಟಿಂಗ್ ಕಾರ್ಯಾಚರಣೆ: ಮೊದಲ ಬೇಟೆ: ವಿಡಿಯೊ ಅಪ್ಲೋಡ್ ಮಾಡಿದ್ದ ರಿತೇಶ್
ಮಾಜಿ ಸಿಎಂ ಸ್ಟಿಂಗ್ ಕಾರ್ಯಾಚರಣೆ: ಮೊದಲ ಬೇಟೆ: ವಿಡಿಯೊ ಅಪ್ಲೋಡ್ ಮಾಡಿದ್ದ ರಿತೇಶ್
Team Udayaprabha25/10/2026
posted on


,


















