| Latest Version 9.0.7 |

Local News

ಬೆಳಗಾವಿ ಆರ್ ಎಲ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ

ಬೆಳಗಾವಿ: ನಗರದ ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಸ್ವಾಯತ್ತ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ ಹಾಗೂ

ಐ ಕ್ಯೂ ಎಸ್ ಸಿ ಸಹಯೋಗದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ದಿನಾಂಕ 26/10/2026 ರಂದು ಬೆಳಗ್ಗೆ 9:೦೦ ಗೆ ಸರ್. ಸಿ ವಿ ರಾಮನ್ ಸಭಾಂಗಣದಲ್ಲಿ ಆಚರಿಸಲಾಯಿತು.

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜ್ಯೋತಿ ಎಸ್ ಕವಳೇಕರ ಅವರು ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಕೈಂಕರ್ಯ ನೆರೆವೇರಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ ಶಶಿಕಾಂತ ಬಿ ತಾರದಳೆ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ಅವರು ಮನುಕುಲಕ್ಕೆ ಮಾದರಿಯಾಗಿದ್ದವರು. ಅವರ ಮೌಲ್ಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಕೆಟ್ಟ ಪ್ರವೃತ್ತಿಯಿಂದ ಒಳ್ಳೆಯ ಪ್ರವೃತ್ತಿಗಳಿಗೆ ಪ್ರತಿಯೊಬ್ಬನು ಮನುಷ್ಯನು ಸಾಗಬೇಕು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಬರೆವುದರ ಮೂಲಕ ತಮ್ಮ ವ್ಯಕ್ತಿತ್ವವನ್ನ ಬೆಳೆಸಿಕೊಂಡವರು. ಒಳ್ಳೆಯ ಕಾರ್ಯಗಳನ್ನು ಮಾಡುವುದರ ಮೂಲಕ ಜಗತ್ತಿನಲ್ಲಿ ಹೆಸರನ್ನು ಗಳಿಸಬಹುದು. ಶ್ರೀ ಮಹರ್ಷಿ ವಾಲ್ಮೀಕಿ ಅವರು ಕೇವಲ ಒಬ್ಬ ವ್ಯಕ್ತಿ ಯಾಗಿರದೆ ಶಕ್ತಿಯಾಗಿದ್ದರು. ಪ್ರತಿಯೊಬ್ಬ ಮನುಷ್ಯ ಒಳ್ಳೆಯ ದಾರಿಯನ್ನು ಕೊಂಡುಕೊಂಡು ಸಮಾಜದಲ್ಲಿ ಆದರ್ಶ ಜೀವನವನ್ನು ನಡೆಸಬೇಕೆಂದು ಕರೆ ನೀಡಿದರು.

ಕೆ ಎಲ್ ಇ ಸಂಸ್ಥೆಯ ಆಜೀವ ಸದಸ್ಯ ಎಸ್ ಜಿ ನಂಜಪ್ಪನವರ,ಡಾ.ಸತೀಶ ಎಂ ಪಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ ಸಿ ಕಾಮಗೋಳ,, ಹಾಗೂ ಎನ್ ಸಿ ಸಿ ಅಧಿಕಾರಿಗಳಾದ ಪ್ರೊ.ಎಚ್ ಎನ್ ಬನ್ನೂರು, ಡಾ.ಶಿವಾನಂದ ಬುಲಬುಲಿ, ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಎಲ್ಲಾ ಸಿಬ್ಬಂದಿ ಎನ್ ಸಿ ಸಿ ಕೆಡೆಟ್ ಗಳು, ಎನ್ ಎಸ್ ಎಸ್ ಸ್ವಯಂ ಸೇವಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Team Udayaprabha
";