| Latest Version 9.0.7 |

Local News

ಆಚರಣೆಗಳು ಅರ್ಥವಂತಿಕೆಯಿಂದ ಕೂಡಿರಲಿ : ಕುಸುಗಲ್ಲ

ಬೆಳಗಾವಿ: ರಾಮತೀರ್ಥ ನಗರದ ಗಣೇಶ ವೃತ್ತದಲ್ಲಿ ರಾಜ್ಯ ಪ.ಪಂಗಡದ ಯುವ ಘಟಕದ ಆಶ್ರಯದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಆಚರಣೆಗಳು ಅದ್ದೂರಿತನಕ್ಕಿಂತ ಅರ್ಥವಂತಿಕೆಗೆ ಕೂಡಿರಲಿ. ರಾಮಾಯಣದಲ್ಲಿ ಸಹೋದರ ಪ್ರೀತಿ, ಆದರ್ಶ ದಾಂಪತ್ಯ, ರಾಮರಾಜ್ಯ ಹೆಗ್ಗಳಿಕೆಯ ಒಳ್ಳೆಯ ಆಡಳಿತ ಇಂತೆಲ್ಲವುಗಳು ಸರ್ವ ಕಾಲಕ್ಕೂ ಸೂಕ್ತವಾಗಿವೆ.

ಬಸವ ಬುದ್ಧ, ಅಂಬೇಡ್ಕರ್, ವಾಲ್ಮೀಕಿ ಇಂತೆಲ್ಲ ಆದರ್ಶ ಪುರುಷರೆಲ್ಲ ನಿರ್ದಿಷ್ಟ ಜಾತಿ ಜನಾಂಗಕ್ಕೆ ಸೀಮಿತರಾಗಿಲ್ಲ. ಮನುಷ್ಯ ಧರ್ಮವನ್ನು ಪ್ರತಿಪಾದಿಸಿದ ಇವರ ಜೀವನಾದರ್ಶ, ತತ್ವ ಇಡಿ ಮನುಕುಲದ ಒಳಿತಿಗಾಗಿ ಇವೆ ಎಂದು ಸಾಹಿತಿ ಶಿ.ಗು.ಕುಸುಗಲ್ಲ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹೇಶ ಶೀಗಿಹಳ್ಳಿ ಮೊದಲಾದವರು ಮಾತನಾಡಿದರು.ಸಂಸ್ಥೆಯ ರಾಜ್ಯಾಧ್ಯಕ್ಷ ಮಹೇಶ ಶೀಗಿಹಳ್ಳಿ, ಸುರೇಶ ಯಾದವ, ಬಸವರಾಜ ಮುತ್ತೆಣ್ಣವರ, ಸಿದರಾಯ ಶೀಗಿಹಳ್ಳಿ, ಸರಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯದ ಮೆಲ್ಪಿಚಾರಕರಾದ ಗಾಡಗೆ, ಬಿ.ಎಚ್.ನಾಯ್ಕ, ಸಿದರಾಯ ನಾಯ್ಕ, ಸತ್ಯನಾಯ್ಕ, ಬಸವರಾಜ ಬೆಣ್ಣಿ ಮೊದಲಾದವರು ಉಪ‍ಸ್ಥಿತರಿದ್ದರು.

Team Udayaprabha
";